fbpx
ಸಮಾಚಾರ

ಸೆಪ್ಟೆಂಬರ್ 05: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 5, 2021 ಭಾನುವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತ್ರಯೋದಶೀ 8:20 am
ನಕ್ಷತ್ರ : ಆಶ್ಲೇಷ 6:07 pm
ಯೋಗ : ಪರಿಘ 8:32 am
ಕರಣ : ವಾಣಿಜ 8:20 am ವಿಷ್ಟಿ 8:04 pm

Time to be Avoided
ರಾಹುಕಾಲ : 4:52 pm – 6:24 pm
ಯಮಗಂಡ : 12:18 pm – 1:49 pm
ದುರ್ಮುಹುರ್ತ : 4:46 pm – 5:35 pm
ವಿಷ : 6:45 am – 8:22 am, 12:00 am – 7:34 am
ಗುಳಿಕ : 3:21 pm – 4:52 pm

Good Time to be Used
ಅಮೃತಕಾಲ : 4:29 pm – 6:07 pm
ಅಭಿಜಿತ್ : 11:53 am – 12:42 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:27 pm
ರವಿರಾಶಿ : ಸಿಂಹ
ಚಂದ್ರರಾಶಿ : ಕರ್ಕಾಟಕ upto 18:07

 

 

 

ಹಿರಿಯರ ಹಿತವಚನ ಆಲಿಸುವುದರಿಂದ ನೀವು ಬಯಸಿದ ವಿಚಾರಗಳಲ್ಲಿ ಯಶಸ್ಸು ಹೊಂದುವಿರಿ. ಮಹಿಳಾ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವುದು. ದೈವಾನುಗ್ರಹದಿಂದ ಹಣಕಾಸಿನ ತೊಂದರೆ ಇರುವುದಿಲ್ಲ.

ಅನಿರೀಕ್ಷಿತವಾಗಿ ಬದಲಾವಣೆ ಎದುರಿಸಬೇಕಾಗುವುದು. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಕೆಲವು ಬದಲಾವಣೆಗಳಾಗುವವು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಒಳ್ಳೆಯ ದಿನಗಳು. ಕುಟುಂಬದವರೊಂದಿಗೆ ಪಾರ್ಟಿಗೆ ಹೋಗುವ ಸಾಧ್ಯತೆ.

ಸದಾ ಹೊಸತನ್ನು ಬಯಸುವ ನಿಮಗೆ ಉದ್ಯಮದಲ್ಲಿ ಪ್ರಗತಿ ಕಂಡುಬರುವುದು. ಕುಟುಂಬ ಸದಸ್ಯರ ದುಂದುವೆಚ್ಚದಿಂದ ನಿಮ್ಮ ಮನಸ್ಸಿಗೆ ಕಿರಿಕಿರಿ ಎನಿಸುವುದು. ಸಂಗಾತಿಯ ಬೆಂಬಲದಿಂದ ಹಿಡಿದ ಕಾರ್ಯ ಪೂರೈಸುವಿರಿ.

ನಿಮ್ಮ ಕನಸು ಸಾಕಾರಗೊಳ್ಳುವುದು. ಎಲ್ಲರನ್ನು ಸಂಭಾಳಿಸುವ ನಿಮ್ಮ ಗುಣ ಹೊಗಳಿಕೆಗೆ ಪಾತ್ರವಾಗುವುದು. ನಾನಾ ಮೂಲಗಳಿಂದ ಹಣ ಬರುವುದು. ಮಕ್ಕಳು ಮಾತ್ರ ನಿಮ್ಮ ವಿರುದ್ಧ ನಿಲ್ಲುವ ಸಂಭವವಿದೆ. ಶಿವನ ಆರಾಧನೆ ಮಾಡಿ.

 

ಇಂದು ನೀವೀಗ ಹೆಚ್ಚು ಕ್ರಿಯಾಶೀಲ ವ್ಯಕ್ತಿಯಾಗಿ ರೂಪುಗೊಳ್ಳುವಿರಿ. ಮನುಜನಿಗೆ ಬರುವ ಕಷ್ಟಗಳ ಮೂಲಕ ಆತ ಹೆಚ್ಚು ಹೆಚ್ಚು ದೃಢತೆಯನ್ನು ಸಂಪಾದಿಸುವನು. ಈ ದಿನ ಹೊಸದೊಂದು ಪಾಠ ಕಲಿಯುವಿರಿ. ಅದು ನಿಮಗೆ ಮುಂದಿನ ದಿನಕ್ಕೆ ದಾರಿ ದೀಪವಾಗುವುದು.

 

ಮನುಜ ಸಂಘಜೀವಿ. ಹಾಗಾಗಿ ಈ ದಿನ ಎಲ್ಲರೊಡನೆ ಬೆರೆತು ನಿಮ್ಮ ದುಃಖವನ್ನು ಮರೆಯಿರಿ. ಜೀವನ ಎದುರಿಸಲು ಒಂದು ಹೊಸ ಸೂತ್ರ ನಿಮಗೆ ದೊರೆಯುವುದು. ಆಪ್ತ ಸ್ನೇಹಿತರ ಸಲಹೆಯಂತೆ ಕಾರ್ಯ ಪ್ರವೃತ್ತರಾಗಿರಿ.

 

ಮರೆಗುಳಿತನದಿಂದ ಭಾರಿ ಹೊಡೆತ ಬೀಳುವುದು. ಮನಸ್ಸಿನ ಚಂಚಲತೆಯನ್ನು ನಿವಾರಿಸಿಕೊಳ್ಳಲು ಮನೋಜಯವನ್ನು ಗಳಿಸಿದ ಮಾರುತಿಯ ಸ್ತೋತ್ರ ಪಠಿಸಿರಿ. ಮಾಡುವ ಖರ್ಚುಧಿವೆಚ್ಚಗಳಿಗೆ ಲೆಕ್ಕ ಇಡಿರಿ. ಆರೋಗ್ಯ ಉತ್ತಮವಾಗಿರುವುದು.

 

ಎಲ್ಲವೂ ಇದ್ದು ಸಕಾಲಕ್ಕೆ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಕೊರಗು ಇಂದು ನಿಮ್ಮನ್ನು ಕಾಡುವುದು. ಮಾಡುವ ಕೆಲಸಗಳನ್ನು ಆದ್ಯತೆಯ ಪ್ರಕಾರ ಪಟ್ಟಿ ಮಾಡಿಟ್ಟುಕೊಳ್ಳಿರಿ. ಇದರಿಂದ ನಿಮ್ಮ ಶ್ರಮ ಮತ್ತು ಸಮಯ ಉಳಿಯುವುದು.

 

ಧನಾತ್ಮಕ ಭಾವನೆಗಳಿಂದ ಜೀವನದಲ್ಲಿ ಧನ್ಯತೆಯ ಭಾವವನ್ನು ಕಾಣುವಿರಿ. ಇದಕ್ಕೆ ಪೂರಕವಾಗಿ ಮನೆಯ ಸದಸ್ಯರು ನಿಮಗೆ ಬೆಂಬಲ ನೀಡುವರು. ಆರೋಗ್ಯದ ವಿಚಾರದಲ್ಲಿ ಗಣನೀಯವಾಗಿ ಚೇತರಿಕೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.

ಕೆಲವು ಕಾರಣಗಳಿಂದ ಈ ದಿನ ನಿಮ್ಮ ಆತ್ಮವಿಶ್ವಾಸ ಕುಂದಲಿದೆ. ಶೀಘ್ರ ಕೋಪಗೊಳ್ಳುವಿರಿ. ಬರುವ ಟೀಕೆಗಳನ್ನು ಸಕಾರಣವಾಗಿ ಚಿಂತಿಸಿ, ತಾಳ್ಮೆಯಿಂದ ಇರಿ.

 

ಹಿರಿಯರ ಆಶಯಕ್ಕೆ ತಕ್ಕಂತೆ ನೀವು ನಿಮ್ಮ ಕಾರ್ಯವನ್ನು ಪೂರೈಸುವಲ್ಲಿ ವಿಫಲರಾಗುವುದರಿಂದ ನಿಮ್ಮ ವಿಶ್ವಾಸಕ್ಕೆ ಕುತ್ತು ಬರಲಿದೆ. ಹಾಗಾಗಿ ನೀವು ಮಾತು ಕೊಟ್ಟ ಪ್ರಕಾರ ಈ ದಿನ ನಡೆದುಕೊಳ್ಳುವುದು ಒಳ್ಳೆಯದು.

 

ಶೀಘ್ರವೇ ಸಿಟ್ಟಾಗುವಂತೆ ನಿಮ್ಮ ಗ್ರಹಗತಿಗಳು ನಿಮ್ಮನ್ನು ಪ್ರೇರೇಪಿಸುತ್ತವೆ. ಆದರೆ ಸಾಧ್ಯವಾದ ಮಟ್ಟಿಗೆ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿರಿ. ಇದರಿಂದ ನಿಮ್ಮ ಘನತೆ ಗೌರವ ಹೆಚ್ಚಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top