fbpx
ಸಮಾಚಾರ

ಕಪಿಲ್‌ ದೇವ್‌ ಹೆಸರಲ್ಲಿದ್ದ ವಿಶೇಷ ದಾಖಲೆ ಮುರಿದ ಬುಮ್ರಾ!

ಓವಲ್ ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ 5 ನೇ ದಿನದಾಟವಾದ ಸೋಮವಾರ ಜಸ್ ಪ್ರೀತ್ ಬುಮ್ರಾ ವೇಗವಾಗಿ 100 ಟೆಸ್ಟ್ ವಿಕೆಟ್ ಗಳನ್ನು ಪೂರೈಸಿದ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆಯಲು ಕಪಿಲ್‌ ದೇವ್‌ 25 ಪಂದ್ಯಗಳನ್ನು ತೆಗೆದುಕೊಂಡರೆ, 27 ವರ್ಷದ ಜಸ್‌ಪ್ರೀತ್‌ ಬುಮ್ರಾ ತಮ್ಮ 24ನೇ ಪಂದ್ಯದಲ್ಲಿ ಈ ಸಾಧನೆ ಮೆರೆದಿದ್ದಾರೆ. ನಾಲ್ಕನೇ ಟೆಸ್ಟ್‌ ಪಂದ್ಯದ ಐದನೇ ದಿನದಾಟದಲ್ಲಿ ಓಲ್ಲೀ ಪೋಪ್ (2) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಬುಮ್ರಾ ಟೆಸ್ಟ್‌ ವಿಕೆಟ್‌ಗಳ ಶತಕ ಬಾರಿಸಿದರು.

ಕಪಿಲ್ ಅವರು 25 ಟೆಸ್ಟ್‌ಗಳಲ್ಲಿ 100 ವಿಕೆಟ್ ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಇರ್ಫಾನ್ ಪಠಾಣ್ (28), ಮುಹಮ್ಮದ್ ಶಮಿ (29) ಹಾಗೂ ಜಾವಗಲ್ ಶ್ರೀನಾಥ್ (30) ಪಟ್ಟಿಯಲ್ಲಿರುವ ಇತರ ಭಾರತೀಯ ವೇಗಿಗಳಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top