fbpx
ಸಮಾಚಾರ

ಕುರಿಗಾಯಿ ಜೊತೆಗೆ ಕುಳಿತು ಊಟ ಮಾಡಿದ ನಟ ಪುನೀತ್: ಅಪ್ಪು ಸರಳತೆಗೆ ನೆಟ್ಟಿಗರ ಮೆಚ್ಚುಗೆ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರದ್ದು ಸರಳ ವ್ಯಕ್ತಿತ್ವ. ಅಭಿಮಾನಿಗಳ ಜೊತೆ ಜನ ಸಾಮಾನ್ಯರ ಜೊತೆ ತಾವು ಕೂಡ ಸಾಮಾನ್ಯರಂತೆ ಬೇರೆಯುತ್ತಾರೆ. ಅಂತಹ ಪುನೀತ್​ ರಾಜ್​ಕುಮಾರ್​ ಕೊಪ್ಪಳದ ಕೂಡ್ಲಿಗಿಯಲ್ಲಿ ಸ್ಥಳೀ ಕಲಾವಿದರ ತಮಟೆ ಡೋಲು ಪ್ರದರ್ಶನವನ್ನು ಮನಸೋತಿದ್ದಾರೆ. ಅಲ್ಲದೇ ಈ ವೇಳೆ ಸ್ಥಳೀಯರೊಂದಿಗೆ ಸಾಮನ್ಯರಂತೆ ಬೆರೆತು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ

ಪುನೀತ್ ರಾಜ್‍ಕುಮಾರ್ ಸಾಮಾನ್ಯರಂತೆ ಜಮೀನಲ್ಲಿ ಕುರಿಗಾಯಿ ಹಾಕಿರುವ ಹಟ್ಟಿಯಲ್ಲಿ ಕುಳಿತು ಊಟ ಮಾಡಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್ ರಾಜ್‍ಕುಮಾರ್ ಅವರು ಬೆಟ್ಟ ಬಂದ್ ಇರುವುದರಿಂದ ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹಲಾಪೂರ, ನಾರಾಯಣ ಪೇಟೆ ಊರುಗಳಿಗೆ ಭೇಟಿಯನ್ನು ನೀಡಿದ್ದಾರೆ.

ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ಭಾನುವಾರ ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಆದ್ರೆ, ಕೊರೋನಾ ಕಾರಣ ಸರ್ವಜನಿಕ ದರ್ಶನಕ್ಕೆ ನಿಷೇಧ ಇದ್ದಿರಿಂದ ಅವರಿಗೆ ದರ್ಶನ ಭಾಗ್ಯ ಸಿಗಲಿಲ್ಲ. ಬಳಿಕ ಅಲ್ಲಿಯೇ ಕೆಲ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ವೇಳೆ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್​ ಕಣ್ಣಿಗೆ ಬಿದ್ದಿದ್ದು, ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್​ ಮಾತುಕತೆ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top