fbpx
ಸಮಾಚಾರ

ಟೀಮ್ ಇಂಡಿಯಾಗೆ ಆಘಾತ: ಹೆಡ್ ಕೋಚ್ ರವಿ ಶಾಸ್ತ್ರೀಗೆ ಕೋವಿಡ್ ಪಾಸಿಟಿವ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿರುವಂತೆಯೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೊರೊನಾವೈರಸ್ ಪರೀಕ್ಷೆಯಲ್ಲಿ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮುಖ್ಯ ಕೋಚ್ ರವಿ ಶಾಸ್ತ್ರಿ ಸಹಿತ ಒಟ್ಟು ನಾಲ್ವರು ಸಹಾಯಕ ಸಿಬ್ಬಂದಿಗಳು ಐಸೊಲೇಶನ್‌ಗೆ ಒಳಗಾಗಿದ್ದಾರೆ.

ರವಿ ಶಾಸ್ತ್ರಿ ಅವರ ಲ್ಯಾಟರಲ್ ಫ್ಲೋ ಟೆಸ್ಟ್ ಧನಾತ್ಮಕ ಪ್ರಕಟವಾಗಿದೆ. ಇದಾದ ಬಳಿಕ ರವಿಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾದ ನಾಲ್ವರು ಸಿಬ್ಬಂದಿಗಳನ್ನು ಐಸೊಲೆಟ್ ಮಾಡಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್, ಫಿಲ್ಡಿಂಗ್ ಕೋಚ್ ಆರ್. ಶ್ರೀಧರ್, ಭಾರತೀಯ ತಂಡದ ಫಿಸಿಯೋ ನಿತೀನ್ ಪಟೇಲ್ ಶಾಮೀಲಾಗಿದ್ದಾರೆ. ಈ ಎಲ್ಲರನ್ನು RT-PCR ಟೆಸ್ಟ್ ಗೂ ಕೂಡ ಒಳಪಡಿಸಲಾಗಿದೆ ಹಾಗೂ ವರದಿ ಬರುವವರೆಗೂ ಕೂಡ ಈ ಆಟಗಾರರು ಹೋಟೆಲ್ ಐಸೋಲೆಶನ್ ನಲ್ಲಿ ಇರಲಿದ್ದಾರೆ.

“ರವಿ ಶಾಸ್ತ್ರಿ ಅವರ ಕೊರೊನಾವೈರಸ್ ಪರೀಕ್ಷೆಯ ವರದಿಯು ಪಾಸಿಟಿವ್ ಬಂದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐನ ವೈದ್ಯಕೀಯ ತಂಡ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಬಿ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ” ಎಂದು ಬಿಸಿಸಿಐ ಮಾಹಿತಿಯನ್ನು ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top