fbpx
ಸಮಾಚಾರ

ಬೇಬಿ ಶಾರ್ಕ್‌ ಹಾಡಿಗೆ ಹೆಜ್ಜೆ ಹಾಕಿದ ಐರಾ, ಯಥರ್ವ್: ಮಕ್ಕಳ ಮುದ್ದಾದ ವಿಡಿಯೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​..!

ರಾಧಿಕಾ ಪಂಡಿತ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮದರ್‌ವುಡ್ ಎಂಜಾಯ್ ಮಾಡುತ್ತಿದ್ದಾರೆ. ಐರಾ ತೊದಲು ಮಾತು ಎಂಜಾಯ್ ಮಾಡುತ್ತಿದ್ದಂತೆ, ಜ್ಯೂನಿಯರ್ ಯಶ್ ಯಥರ್ವ್ ಎಂಟ್ರಿ ಆಯ್ತು. ಈಗ ಮನೆಯಲ್ಲಿ ಡಬಲ್ ಧಮಾಕ ಜೋರಾಗಿದೆ. ಮಕ್ಕಳ ಸಣ್ಣಪುಟ್ಟ ವಿಡಿಯೋ ಹಂಚಿಕೊಂಡು ಫಾಲೋವರ್ಸ್‌ನ ಎಂಗೇಜ್‌ ಆಗಿಟ್ಟುಕೊಂಡಿರುವ ರಾಧಿಕಾ ಸೂಪರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

 

 

ಈ ವಾರವನ್ನು ನಾವು ಸಂಗೀತದೊಂದಿಗೆ ಆರಂಭಿಸೋಣ. ಕಳೆದ ಎರಡು ವರ್ಷದಿಂದ, ನಾನು ಪಣ ತೊಟ್ಟಿರುವ ಸಂಗೀತ ಎಂದು ಬರೆದುಕೊಂಡು ಮಕ್ಕಳು ಗೂಗಲ್‍ಗೆ ಅವಾಜ್ ಹಾಕುತ್ತಾ ಬೇಬಿ ಸಾಂಗ್ ಹಾಕಿ ಎಂದು ಹೇಳುತ್ತಾ ಕುಣಿದಿದ್ದಾರೆ. ಈ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಮ್ ಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಮುದ್ದುಮಕ್ಕಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋ ಅಭಿಮಾನಿಗಳ ಮನಸೆಳೆದಿದ್ದು, ಆಯ್ರಾ ಬ್ರದರ್​​ ಶಾರ್ಕ್​ ಡೂ ಡೂ ಡೂ ಎನ್ನುವ ಸಾಲು ಮೆಚ್ಚುಗೆ ಪಡೆದಿದೆ. ಈ ಹಿಂದೆ ಕೂಡ ತಮ್ಮ ತಂದೆಯವರ ಭೀಮ್​ ಸೇನ್​ ಜೋಶಿ ಹಾಡಿಗೆ ಮಗ ಹೇಗೆ ದನಿಯಾಗುತ್ತಿದ್ದಾನೆ ಎಂಬ ವಿಡಿಯೋವನ್ನು ನಟಿ ರಾಧಿಕಾ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top