fbpx
ಸಮಾಚಾರ

ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರೋಗ್ಯ ವಿಚಾರಿಸಿದ ಹಿರಿಯ ನಟಿಯರು

ಹಿರಿಯ ನಟಿ ಲೀಲಾವತಿ ಕೆಲವು ದಿನಗಳ ಹಿಂದೆಯಷ್ಟೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಬಚ್ಚಲ ಮನೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ಸೊಂಟಕ್ಕೆ ಗಾಯ ಮಾಡಿಕೊಂಡಿದ್ದರು. ಲೀಲಾವತಿ ಅವರು ಕೆಲ ತಿಂಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದರು. ಅಂತೆಯೇ ಮನೆಗೆ ಬಂದ ನಂತರ ವಿಶ್ರಾಂತಿ ಪಡೆಯುತ್ತಿರುವ ನಟಿಯ ಮನೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಭೇಟಿ ನೀಡುತ್ತಾ ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

ಹೌದು, ಈ ಹಿಂದೆ ನಟಿ ಸುಧಾರಾಣಿ, ಮಾಳವೀಕಾ ಅವಿನಾಶ್​ ಹಾಗೂ ಶ್ರುತಿ ಅವರು ಭೇಟಿ ಕೊಟ್ಟು ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಈಗ ನಟಿಯರಾದ ಭಾರತಿ ವಿಷ್ಣುವರ್ಧನ್​, ಹೇಮಾ ಚೌಧರಿ ಹಾಗೂ ಶ್ರುತಿ ಅವರು ಲೀಲಾವತಿ ಅವರ ಮನೆಗೆ ಹೋಗಿದ್ದಾರೆ.

ಇದೆ ವೇಳೆ ಹೇಮಾ ಚೌಧರಿ, ಲೀಲಾವತಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಶ್ರುತಿ, ಲೀಲಾವತಿ ಅವರ ಮನೆಯಲ್ಲಿ ಬಿರಿಯಾನಿ ಮಾಡಿ, ಊಟವನ್ನು ಬಡಿಸಿದ್ದಾರೆ. ನಂತರ ಲೀಲಾವತಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ಬಾಳೆ ಎಲೆಯ ಮೇಲೆ ದೊನ್ನೆ ಬಿರಿಯಾನಿ ಸವಿದಿದ್ದಾರೆ. ಒಂದಿಡಿ ದಿನವನ್ನು ಅವರೊಂದಿಗೆ ಕಳೆದು ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಆ ಭೇಟಿಯ ವಿಡಿಯೋ ತುಣುಕನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಶ್ರುತಿ ‘ಮತ್ತೊಂದು ಅವಿಸ್ಮರಣೀಯ ದಿನ’ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top