fbpx
ಸಮಾಚಾರ

ಬುಲೆಟ್ ಪ್ರಕಾಶ್ ಮಗನ ಮೇಲೆ ಹಲ್ಲೆ ದಾಳಿ; ಪ್ರಕರಣ ದಾಖಲು

ಹಾಸ್ಯ ನಟ ದಿ. ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿಗೆ ಒಳಗಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಬಳಿ‌ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಕೆಲವು ಮಂಗಳಮುಖಿಯರು ದಾಳಿ ನಡೆಸಿರುವ ಆರೋಪ ಮಾಡಲಾಗಿದೆ.

ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ರಕ್ಷಕ್ ವಾಪಸಾಗುತ್ತಿದ್ದಾಗ, ಅವರ ಬ್ಯಾಗ್ಅನ್ನು ಮಂಗಳಮುಖಿಯರು ಎಳೆದಿದ್ದಾರೆ. ಆಗ ಬೈಕ್‌ನಿಂದ ಕೆಳಗೆ ಬಿದ್ದು ರಕ್ಷಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಬೈಕ್ ಸ್ಥಳದಲ್ಲಿಯೇ ಬಿಟ್ಟು ರಕ್ಷಕ್ ಓಡಿಹೋಗಿ, ಪೊಲೀಸರ ಸಹಾಯದಿಂದ ಅವರು ಬೈಕ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ಗಾಡಿಯು ಡ್ಯಾಮೇಜ್ ಆಗಿದೆ. ಮಂಗಳ ಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಲೈ ಒವರ್ ಮೇಲೆ ಗಾಡಿ ಬಿಟ್ಟು ರಕ್ಷಕ್ ಅಲ್ಲಿಂದ ಓಡಿ ಹೋಗಿದ್ದಾರೆ.

ಹೆಬ್ಬಾಳ ಪೊಲೀಸರ ನೆರವಿನಲ್ಲಿ ಗಾಡಿಯನ್ನು ತೆಗೆದು ಕೊಂಡು ಮನೆಗೆ ವಾಪಸ್ ಆಗಿದ್ದಾರೆ ರಕ್ಷಕ್. ಬೆಂಗಳೂರಿನಲ್ಲಿ ಮಂಗಳಮುಖಿಯರ ಸಂಖ್ಯೆ ಹೆಚ್ಚಾಗಿದ್ದು ತಡರಾತ್ರಿ ಪ್ರಯಾಣಿಸುವವರಿಗೆ ತೊಂದರೆ ನೀಡುವ ಘಟನೆಗಳು ನಡೆಯುತ್ತಿರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top