fbpx
ಸಮಾಚಾರ

ಕನ್ನಡ ಭಾಷೆಯನ್ನು ‘ಕೆಟ್ಟ ಭಾಷೆ’ ಎಂದು ತೋರಿಸಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಬಳಿ ಕ್ಷಮೆಯಾಚಿಸಿದ ಗೂಗಲ್

ಕನ್ನಡವನ್ನು ‘ಭಾರತದ ಅತ್ಯಂತ ಕುರೂಪಿ ಭಾಷೆ’ (ugliest language in India) ಎಂದು ತೋರಿಸಿದ್ದ ಗೂಗಲ್ ಈ ಸಂಬಂಧ ಬುಧವಾರ ಕರ್ನಾಟಕ ಹೈಕೋರ್ಟ್​ ಎದುರು ಕ್ಷಮೆಯಾಚಿಸಿದೆ. ಗೂಗಲ್ ಕ್ಷಮೆಯನ್ನು ಒಪ್ಪಿಕೊಂಡಿರುವ ಹೈಕೋರ್ಟ್​, ಅದರ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಸೂಚಿಸಿತು.

ವಿಚಾರಣೆ ನಡೆಸಿದ ನ್ಯಾಯಾಲಯ, ‘ಈ ಬಗ್ಗೆ ನಡೆದ ಘಟನೆಗೆ ಏನು ಕಾರಣ ಎಂದು ಗೂಗಲ್ ಸ್ಪಷ್ಟವಾಗಿ ನಮಗೆ ತಿಳಿಸಿದೆ. ಅಲ್ಲದೆ ಸಾರ್ವಜನಿಕವಾಗಿ ಕನ್ನಡಿಗರ ಕ್ಷಮೆ ಕೇಳಿದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಿದ್ದೇವೆ’ ಎಂದು ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.

ಕನ್ನಡ ಭಾಷೆಯ ಬಗ್ಗೆ ಗೂಗಲ್​ನಲ್ಲಿ ಅವಹೇಳನ ಮಾಡಲಾಗಿದೆ ಎಂದು ದೂರಿದ್ದ ಅರ್ಜಿದಾರರು, ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆಯ ತುಣುಕನ್ನು ಲಗತ್ತಿಸಿದ್ದರು. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸಲಾಗುವುದು ಎಂಬ ಗೂಗಲ್​ನ ಭರವಸೆಯನ್ನೂ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top