fbpx
ಸಮಾಚಾರ

ಚಿತ್ರೀಕರಣದ ವೇಳೆ ನಟಿ ತ್ರಿಷಾ ಎಡವಟ್ಟು: ಬಂಧಿಸುವಂತೆ ಹಿಂದೂ ಸಂಘಟನೆಗಳ ಆಗ್ರಹ

ನಟಿ ತ್ರಿಶಾ ಕೃಷ್ಣನ್ ‘ಪೊನ್ನಿಯಾನ್​ ಸೆಲ್ವನ್‘ ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲಿ ತ್ರಿಶಾ ಕೃಷ್ಣನ್​ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಬಂಧನದ ಭೀತಿ ಎದುರಾಗಿದೆ.

ಶೂಟಿಂಗ್ ವೇಳೆ ನಟಿ ತ್ರಿಷಾ ಕೃಷ್ಣನ್ ಮಾಡಿದ ಎಡವಟ್ಟಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ ಕೃಷ್ಣನ್ ಅವರನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಪರಿಣಾಮ, ನಟಿ ತ್ರಿಷಾ ಕೃಷ್ಣನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದೋರ್‌ನಲ್ಲಿನ ಐತಿಹಾಸಿಕ ದೇವಾಲಯದಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಭಾಗದ ಸೀನ್‌ಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ವೇಳೆ ಶೂಟಿಂಗ್ ಗ್ಯಾಪ್‌ನಲ್ಲಿ ದೇವಸ್ಥಾನದೊಳಗೆ ನಟಿ ತ್ರಿಷಾ ಕೃಷ್ಣನ್ ಚಪ್ಪಲಿ ಧರಿಸಿ ಓಡಾಡುತ್ತಿದ್ದರು ಎನ್ನಲಾಗಿದೆ. ದೇವಸ್ಥಾನದಲ್ಲಿರುವ ಶಿವಲಿಂಗ ಹಾಗೂ ನಂದಿ ಮಧ್ಯೆ ನಟಿ ತ್ರಿಷಾ ಕೃಷ್ಣನ್ ಚಪ್ಪಲಿ ಧರಿಸಿ ಓಡಾಡುತ್ತಿರುವ ಫೋಟೋಗಳನ್ನು ಅಲ್ಲಿನ ಜನ ಕ್ಲಿಕ್ ಮಾಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅನೇಕರು ಇದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಅದರಲ್ಲೂ ತಮಿಳುನಾಡಿನ ಹಿಂದೂ ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂ ಅವರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ತ್ರಿಷಾ ಕೃಷ್ಣನ್ ಅವರ ವರ್ತನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top