fbpx
ಸಮಾಚಾರ

‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’ ಚಿತ್ರಗಳ ಖ್ಯಾತ ನಿರ್ಮಾಪಕ ನಿಧನ

ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಹಿರಿಯ ನಿರ್ಮಾಪಕ ಸಿ. ಜಯರಾಮ್​​ ಅವರು ಸೆ.8ರಂದು ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದಿದ್ದು, ಗುರುವಾರ (ಸೆ.9) ಮಧ್ಯಾಹ್ನ ಸುಮ್ಮನಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಶಂಕರ್ ನಾಗ್ ನಟನೆಯ ‘ಆಟೋ ರಾಜ’, ಅನಂತ್ ನಾಗ್ ನಟನೆಯ ‘ನಾ ನಿನ್ನ ಬಿಡಲಾರೆ’, ಡಾ.ವಿಷ್ಣುವರ್ಧನ್ ಮತ್ತು ರಜನಿಕಾಂತ್ ನಟನೆಯ ‘ಗಲಾಟೆ ಸಂಸಾರ’, ಶ್ರೀನಾಥ್ ನಟನೆಯ ‘ಪಾವನ ಗಂಗಾ’ ಸೇರಿದಂತೆ ಅನೇಕ ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಈ ನೋವಿನ ಸುದ್ದಿ ಕೇಳಿ ಚಿತ್ರರಂಗದ ಕೆಲವು ಆಪ್ತರಿಗೆ ಶಾಕ್ ಆಗಿದೆ. ಸಿ.ಜಯರಾಮ್ ಅವರ ಪುತ್ರ ಮಿಲನ ಪ್ರಕಾಶ್ ಕೂಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಸಿನಿ ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ. ಜಯರಾಮ್ ಅವರ ಪುತ್ರ ‘ಮಿಲನ’ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ದೊಡ್ಡ ಹೆಸರು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top