fbpx
ಸಮಾಚಾರ

ಚಿರಂಜೀವಿ ಅಳಿಯ ಸಾಯಿ ಧರಮ್​ ತೇಜ್​ ಆಕ್ಸಿಡೆಂಟ್​ನ ಸಿಸಿಟಿವಿ ವಿಡಿಯೋ ವೈರಲ್

ಟಾಲಿವುಡ್ ನಟ ಸಾಯಿ ಧರಮ್ ತೇಜ್ ಪ್ರಯಾಣಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ನಿನ್ನೆ (ಶುಕ್ರವಾರ, ಆಗಸ್ಟ್ 10) ಸಂಜೆ ಹೈದರಾಬಾದ್‌ನ ಮಾಧಾಪುರ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಗಂಭೀರವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಟ ಸಾಯಿ ಧರಮ್ ತೇಜ್ ಗಾಯಗೊಂಡಿದ್ದಾರೆ. ನಟ ಸಾಯಿ ಧರಮ್ ತೇಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

ಅಪಘಾತದ ತೀವ್ರತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಾಯಿ ಧರ್ಮ ತೇಜ್ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಹೊಟ್ಟೆಯ ಮತ್ತು ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಖ್ಯಾತ ನಟ ಚಿರಂಜೀವಿ ಅವರ ಅಳಿಯನಾಗಿರುವ ಸಾಯಿ ಧರ್ಮ ತೇಜ್ ಅವರ ಸ್ಪೋರ್ಟ್ಸ್ ಬೈಕ್ ನ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

 

ಅಪಘಾತದ ವೇಳೆ ಸಾಯಿ ಧರಂ ತೇಜ್ ಹೆಲ್ಮೆಟ್​ ಧರಿಸಿದ್ದರು ಆದ್ದರಿಂದ ತಲೆ ಭಾಗಕ್ಕೆ ಬೀಳಬೇಕಾಗಿದ್ದ ತೀವ್ರ ಸ್ವರೂಪದ ಏಟು ತಪ್ಪಿಹೋಗಿದೆ. ಅತಿಯಾದ ವೇಗದಲ್ಲಿ ಬೈಕ್​ ಓಡಿಸಿದ್ದರಿಂದಲೇ ಅನಾಹುತ ಸಂಭವಿಸಿರುವುದು ಮೇಲ್ನೋಟಕ್ಕೆ ಕಾಣಿಸಿದ್ದು, ಸ್ಪೋರ್ಟ್ಸ್ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿ ಧರಂ ತೇಜ್ ಅವರ​ ಬಲಗಣ್ಣು, ಎದೆ, ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಚಿರಂಜೀವಿ ಕುಟುಂಬದ ಸದಸ್ಯರಾಗಿರುವ ಸಾಯಿ ಧರ್ಮ ತೇಜ್‌ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು ಚಿರಂಜೀವಿ, ಪವನ್‌ಕಲ್ಯಾಣ್‌, ವರುಣ್‌ ತೇಜ್‌ ಸೇರಿದಂತೆ ಹಲವರು ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top