fbpx
ಸಮಾಚಾರ

ಕೊನೆಗೂ ಈಡೇರಿತು ಒಲಿಂಪಿಕ್ಸ್‌ ಹೀರೋ ನೀರಜ್ ಚೋಪ್ರಾ ಬಾಲ್ಯದ ಕನಸು

ನೀರಜ್ ಚೋಪ್ರಾ ಅವರಿಗೆ, 2021ನೇ ವರ್ಷವು ಕನಸುಗಳಿಗೆ ರೆಕ್ಕೆಗಳನ್ನು ಕಟ್ಟುವ ವರ್ಷವಾಗಿದೆ. ಮೊದಲ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವರ ಕನಸು ಈಡೇರಿತು. ಈಗ ಅವರು ಬಾಲ್ಯದಿಂದಲೂ ಕಂಡಿದ್ದ ಈಡೇರದ ಕನಸು ನನಸಾಗಿದೆ. ಅದೆನೆಂದರೆ ವೀರಜ್​ಗೆ ಚಿಕ್ಕಂದಿನಿಂದಲೂ ತಮ್ಮ ಕುಟುಂಬದವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುದಾಗಿತ್ತು.

ಹೌದು. ನೀರಜ್ ಚೋಪ್ರಾ ಅವರ ತಂದೆ ತಾಯಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಸ್ವತಃ ನೀರಜ್ ಚೋಪ್ರಾ ಅವರು ಟ್ವಿಟ್ಟರ್ ನಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಹೆತ್ತವರನ್ನು ಅವರ ಮೊದಲ ಬಾರಿ ವಿಮಾನದಲ್ಲಿ ಕರೆದುಕೊಂಡು ಹೋಗಲು ಇಂದು ಸಾಧ್ಯವಾಗಿದೆ. ನನ್ನ ಒಂದು ಸಣ್ಣ ಕನಸು ಇಂದು ನನಸಾಯಿತು” ಎಂದು ನೀರಜ್ ಚೋಪ್ರಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಮುಗಿಸಿಕೊಂಡು ಬಂದ ನಂತರ ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಅನಾರೋಗ್ಯಕ್ಕೀಡಾದ ಕಾರಣ ನೀರಜ್ ಚೋಪ್ರಾ ಸದ್ಯಕ್ಕೆ ಯಾವುದೇ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಈ ವರ್ಷ ಡಿಸೆಂಬರ್ ವರೆಗೆ ಯಾವುದೇ ಚ್ಯಾಂಪಿಯನ್ ಷಿಪ್ ಗೇಮ್ ಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಮುಂದಿನ ವರ್ಷ ಹೊಸ ಉತ್ಸಾಹದೊಂದಿಗೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top