fbpx
ಸಮಾಚಾರ

ಸೆಪ್ಟೆಂಬರ್ 12: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 12, 2021 ಭಾನುವಾರ
ವರ್ಷ : 1943 ಪ್ಲಾವ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಷಷ್ಠೀ 5:20 pm
ನಕ್ಷತ್ರ : ವಿಶಾಖ 9:50 am
ಯೋಗ : ವೈಧೃತಿ 11:43 am
ಕರಣ : ಕುಲವ 6:27 am ತೈತುಲ 5:20 pm

Time to be Avoided
ರಾಹುಕಾಲ : 4:48 pm – 6:19 pm
ಯಮಗಂಡ : 12:15 pm – 1:46 pm
ದುರ್ಮುಹುರ್ತ : 4:42 pm – 5:30 pm
ವಿಷ : 1:35 pm – 3:06 pm
ಗುಳಿಕ : 3:17 pm – 4:48 pm

Good Time to be Used
ಅಮೃತಕಾಲ : 10:37 pm – 12:07 am
ಅಭಿಜಿತ್ : 11:51 am – 12:39 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:22 pm
ರವಿರಾಶಿ : ಸಿಂಹ
ಚಂದ್ರರಾಶಿ : ವೃಶ್ಚಿಕ

 

 

 

ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನು ಗೌರವಿಸಿ ಮುಂದೆ ಉತ್ತಮ ದಿನಗಳಿವೆ.

ಆತ್ಮೀಯ ಗೆಳೆಯರು ನಿಮ್ಮಿಂದ ಕೆಲ ವಿಷಯ ತಿಳಿಯಲು ಕಾತುರರಾಗಿದ್ದಾರೆ. ಅವರಿಗೆ ನಿಮ್ಮ ವಿಚಾರಧಾರೆಗಳನ್ನು ತಿಳಿಸುವಿರಿ. ಇದರಿಂದ ಅವರು ಪ್ರಭಾವಿತರಾಗಿ ನಿಮ್ಮನ್ನು ಕೊಂಡಾಡುವರು.

ಸಣ್ಣ ವಿಷಯವನ್ನು ಕೂಡ ಭೂತ ಕನ್ನಡಿಯಿಂದ ನೋಡಿ ಪರೀಕ್ಷಿಸುವ ಮನಸ್ಥಿತಿಯಿರುವ ನೀವು, ಕೆಲವೊಮ್ಮೆ ಉದಾರಿಗಳಾಗಬೇಕಿದೆ. ತಪ್ಪು ಮಾಡದ ಮನುಜ ಈ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಇತರರು ಮಾಡುವ ತಪ್ಪಿಗೆ ಕ್ಷ ಮೆ ನೀಡಿರಿ.

ಜೀವನದಲ್ಲಿ ಹಿರಿಯರನ್ನು, ಸ್ತ್ರೀಯರನ್ನು ಗೌರವದಿಂದ ಕಾಣಿರಿ. ಇದರಿಂದಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು ಮತ್ತು ಸಮಾಜದಲ್ಲಿ ಗೌರವ ಹೊಂದುವಿರಿ. ಗುರುವಿನ ಅನುಗ್ರಹ ಸಂಪಾದಿಸಲು ಗುರುಸ್ತೋತ್ರ ಪಠಿಸಿರಿ.

 

ನಿಮ್ಮ ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ‍್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿರಿ.

 

ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸಬೇಕೆಂದು ಎಂಬುದನ್ನು ತಿಳಿಯಿರಿ.

 

ಕೆಲಸದ ಒತ್ತಡಗಳು ನಿದ್ದೆಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜತೆಯಲ್ಲಿ ಅಥವಾ ಅನುಭವಿಗಳ ಹತ್ತಿರ ಕೆಲಸ ಕುರಿತು ಚರ್ಚಿಸುವುದರಿಂದ ಮನಸ್ಸಿಗೆ ಹಿತವೆನಿಸುವುದು.

 

ಮನೆ ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗುವುದು. ಎಲ್ಲರನ್ನೂ ಎಲ್ಲ ಕಾಲಕ್ಕೂ ಖುಷಿ ಪಡಿಸಲು ಆಗುವುದಿಲ್ಲ. ಮನಸು ದಣಿದರೆ ವಿಶ್ರಾಂತಿ ಪಡೆಯಿರಿ. ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದು.

 

ಹೊರಗಿನ ಕಳ್ಳರನ್ನು ಹಿಡಿಯಬಹುದು. ಮನೆಯ ಕಳ್ಳರನ್ನು ಹಿಡಿಯುವುದು ಕಷ್ಟ. ಅಂತೆಯೇ ನೀವು ಯಾರನ್ನು ಗೌರವದಿಂದ ಕಾಣುತ್ತಿರುವಿರೋ ಅವರನ್ನು ಅಪಮಾನಿಸಬೇಡಿ. ಕಾಲಚಕ್ರ ಒಂದೇ ತೆರನಾಗಿರುವುದಿಲ್ಲ. ಭಿನ್ನಾಭಿಪ್ರಾಯಗಳಿದ್ದಲ್ಲಿ ಉಭಯತರರು ಒಂದೆಡೆ ಸೇರಿ ಬಗೆಹರಿಸಿಕೊಳ್ಳಿ.

ಹಳೆಯ ವೈಭವಗಳನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗದು. ಭವಿಷ್ಯದ ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ಕೈಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈ ದಿನ ಹೊರ ಬರಬೇಕು. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿ. ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುವುದು.

 

 

ಸಲ್ಲದ ವಿಷಯಗಳ ಬಗ್ಗೆ ಅನಗತ್ಯ ಕುತೂಹಲ ತೋರಿಸಲು ಹೋಗಿ ಫಜೀತಿ ತಂದಕೊಳ್ಳಬೇಡಿ. ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಮುಂದಡಿ ಇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗುವುದು. ನಿಮ್ಮ ನಾಯಕತ್ವಕ್ಕೆ ಯಶಸ್ಸು ದೊರೆಯುವುದು. ಇನ್ನಷ್ಟು ಯಶಸ್ಸು ಗಳಿಸಲು ಸಹನೆ, ತಾಳ್ಮೆ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top