fbpx
ಸಮಾಚಾರ

ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ: ಸಿಕ್ಕಾಪಟ್ಟೆ ವೈರಲ್

ಕೊರೋನಾ ಕಾರಣದಿಂದಾಗಿ ದೇಶಾದ್ಯಂತ ಗಣೇಶೋತ್ಸವ ಸರಳವಾಗಿ ನಡೆಯುತ್ತಿದೆ. ಹಾಗೆಯೆ ಈ ಬಾರಿಯ ಗಣೇಶೋತ್ಸವವನ್ನು ನಾನಾ ಬಗೆಯ ಗಣೇಶ ಮೂರ್ತಿಗಳು ಮತ್ತಷ್ಟು ರಂಗೇರಿಸುತ್ತಿವೆ. ಈಗಾಗಲೇ ಮಾರುಕಟ್ಟೆ ಪ್ರವೇಶ ಮಾಡಿರುವ ಮೂರ್ತಿಗಳ ಕೆಲವು ವಿಶೇಷ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿದೆ.

ಸಿನಿಮಾ ಗೆಟಪ್​ಗಳಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವುದು ಹೊಸದೇನಲ್ಲ. ಕಳೆದ ಬಾರಿ ಪ್ರಭಾಸ್‌ ಅಭಿನಯದ ‘ಬಾಹುಬಲಿ’, ‘ಸುದೀಪ್ ನಟನೆಯ ಪೈಲ್ವಾನ್, ದರ್ಶನ ನಟನೆಯ ಕುರುಕ್ಷೇತ್ರ, ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ಅವತಾರದಲ್ಲಿ ಗಣೇಶನನ್ನು ತಯಾರಿಸಲಾಗಿತ್ತು.. ಇದೀಗ ವಿಕ್ರಾಂತ್ ರೋಣ ಗಣೇಶ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾನೆ.

ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಕ್ರೇಜ್ ಕಂಡು, ಅದೇ ರೀತಿಯಾದ ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿದೆ.ಕೈಯಲ್ಲಿ ಗ್ಯಾನ್ ಹಿಡಿದು ವಿಶಿಷ್ಟ ಆಸನದ ಮೇಲೆ ‘ಸುದೀಪ್’ ಸ್ಟೈಲ್ ನಲ್ಲಿ ಗಣೇಶ ಕುಳಿತಿದ್ದಾನೆ.. ಈ ವಿಕ್ರಾಂತ್ ರೋಣ ಗಣೇಶನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top