fbpx
ಸಮಾಚಾರ

ಬಂಧನದ ಭೀತಿಯಲ್ಲಿ ವಿವಾದಾತ್ಮಕ ​ನಟಿ ಕಂಗನಾ ರಣಾವತ್

ಸಿನಿಮಾ ವಿಚಾರಗಳಿಗಿಂತ ಕೇವಲ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ಚಿತ್ರ ಸಾಹಿತಿ ಜಾವೇದ್​ ಅಖ್ತರ್ ಅವರು ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ಮೊಕದ್ದಮೆ ದಾಖಲಿಸಿದ್ದರು.​ ಈ ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದ ಕಂಗನಾ ರನೌತ್​ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ.

ಕಂಗನಾ ರನೌತ್ ಅವರಿಗೆ ಆರೋಗ್ಯ ಸರಿಯಾಗಿಲ್ಲ. ಹೀಗಾಗಿಯೇ ಅವರು ಇವತ್ತು ನ್ಯಾಯಾಲಯದ ಮುಂದೆ ಹಾಜರಾಗಲು ಆಗಲಿಲ್ಲ ಎಂದು ವಕೀಲರು ಕಾರಣ ನೀಡಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕ ನೀಡುವಂತೆ ಮನವಿ ಮಾಡಿದರು.

ವಕೀಲರ ಮನವಿಯಂತೆ ನ್ಯಾಯಾಲಯ ಸೆ. 20ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ. ಮುಂದಿನ ವಿಚಾರಣೆ ವೇಳೆ ಕಂಗನಾ ನ್ಯಾಯಾಲಯದ ಮುಂದೆ ಹಾಜರಾಗದೇ ಹೋದಲ್ಲಿ ಅವರನ್ನು ಬಂಧಿಸಲು ವಾರೆಂಟ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top