fbpx
ಸಮಾಚಾರ

ಸುದೀಪ್ ಫೋಟೋಗೆ ರಮ್ಯಾ ಮಾಡಿದ ಕಾಮೆಂಟ್ ಏನು ಗೊತ್ತಾ?

ಸ್ಯಾಂಡಲ್‍ವುಡ್‍ನ ಮೋಹಕತಾರೆ ರಮ್ಯಾ ಕಿಚ್ಚ ಸುದೀಪ್ ಅವರ ಜೀಮ್ ಫೋಟೋವನ್ನು ನೋಡಿ ಫಿದಾ ಆಗಿದ್ದಾರೆ. ಕಾಮೆಂಟ್ ಮಾಡುವ ಮೂಲಕವಾಗಿ ರಮ್ಯಾ ಸುದ್ದಿಯಾಗಿದ್ದಾರೆ.

 

 

ಕಿಚ್ಚ ಬಹಳ ದಿನಗಳ ನಂತರ ಮತ್ತೆ ವರ್ಕಔಟ್ ಶುರು ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಹೊಸ ಸಿನಿಮಾಗಳ ಕೆಲಸಗಳಿಗೆ ಬ್ರೇಕ್ ಆಗಿತ್ತು. ಈ ಬ್ರೇಕ್‍ನಲ್ಲಿ ಜಿಮ್‍ಗೆ ಕೂಡ ಅಲ್ಪ ವಿರಾಮ ಪಡೆದು ಚಿಲ್ ಮಾಡುತ್ತಿದ್ದರು. ಈಗ ಮತ್ತೆ ಜಿಮ್‍ನಲ್ಲಿ ಬೆವರು ಸುರಿಸಿ ಕಟ್ಟುಮಸ್ತಾದ ದೇಹ ಪಡೆಯಲು ಅಖಾಡಕ್ಕೆ ಇಳಿದಿದ್ದಾರೆ. ಮತ್ತೆ ಜಿಮ್‍ಗೆ ಎಂಟ್ರಿ ಕೊಟ್ಟಿದ್ದೀನಿ ಅಂತ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‍ವೊಂದನ್ನು ಹಾಕಿದ್ದರು. ಅಭಿಮಾನಿಗಳು ಕಿಚ್ಚನಿಗೆ ಮೆಚ್ಚುಗೆ ಸೂಚಿಸುವುದು ಸಹಜ ಆದರೆ ಮೋಹಕ ತಾರೆ ರಮ್ಯಾ “ATTA BOY” ಎಂದು ಕಾಮೆಂಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

ಸ್ಯಾಂಡಲ್​ವುಡ್​​ನ ಮುದ್ದು ಜೋಡಿಗಳಲ್ಲಿ ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಕೂಡ ಒಂದು.. ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ ಹಾಗೂ ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ಸುದೀಪ್ ಮತ್ತು ರಮ್ಯಾ ಒಟ್ಟಾಗಿ ಕಂಗೊಳಿಸಿದ್ದಾರೆ. ಸುದೀಪ್ ಅವರ ಸಿನಿಮಾ ಕಂಡಾಗ, ಸುದೀಪ್ ಅವರ ಬರ್ತ್​ಡೇ ಬಂದಾಗ ರಮ್ಯಾ ಟ್ವೀಟ್ ಸಂದೇಶದ ಮೂಲಕ ಶುಭಾಶಯಗಳನ್ನ ತಿಳಿಸುತ್ತಿರುತ್ತಾರೆ. ರಮ್ಯಾ ಅವರ ಬರ್ತ್​ಡೇಗೂ ಸುದೀಪ್ ಬೆಸ್ಟ್ ವಿಶಸ್ ಅನ್ನ ಟ್ವೀಟಿಸುತ್ತಾರೆ.. ಇವತ್ತಿಗೂ ರಮ್ಯಾ ಮತ್ತು ಸುದೀಪ್ ಅವರ ನಡುವೆ ಉತ್ತಮ ಫ್ರೆಂಡ್​ಶಿಪ್ ಇದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top