fbpx
ಸಮಾಚಾರ

ಪತ್ನಿ ಸಮಂತಾಗೆ ಥ್ಯಾಂಕ್ಸ್ ಹೇಳಿದ ಪತಿ ನಾಗಚೈತನ್ಯ

ನಾಗ ಚೈತನ್ಯ ಜತೆ ನಟಿ ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ, ಅವರ ಸಂಬಂಧ ಶೀಘ್ರವೇ ಮುರಿದು ಬೀಳಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಇದಕ್ಕೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಸಮಂತಾ ಅವರಂತೂ ಆ ಬಗ್ಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇನ್ನು, ಅಕ್ಕಿನೇನಿ ಕುಟುಂಬ ಮಾಧ್ಯಮದ ಎದುರು ಬಂದಿರಲಿಲ್ಲ..

ಆದರೆ ಈಗ ಬಹುದಿನಗಳ ಬಳಿಕ ಪತಿ ನಾಗ ಚೈತನ್ಯ ಸಿನಿಮಾ ಬಗ್ಗೆ ಸಮಂತಾ ಮಾತನಾಡಿದ್ದಾರೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೊತೆಯಾಗಿ ‘ಲವ್​ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಅದರ ಬಗ್ಗೆ ಸಮಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಚಿತ್ರದ ಟ್ರೈಲರ್ ಬಗ್ಗೆ ನಾಗ ಚೈತನ್ಯ ಟ್ವೀಟ್ ಮಾಡಿದ್ದರು. ಪತಿ ನಾಗ ಚೈತನ್ಯ ಮಾಡಿದ್ದ ಟ್ವೀಟ್‌ಅನ್ನು ಸಮಂತಾ ರೀ-ಟ್ವೀಟ್ ಮಾಡಿದ್ದಾರೆ. ಜೊತೆಗೆ ‘’ವಿನ್ನರ್.. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’’ ಎಂದು ಸಮಂತಾ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೇ, ತಮ್ಮ ಟ್ವೀಟ್‌ನಲ್ಲಿ ನಟಿ ಸಾಯಿ ಪಲ್ಲವಿ ಅವರ ಹ್ಯಾಂಡಲ್‌ ಹಾಕಿದ್ದಾರೆ.

ನಟಿ ಸಮಂತಾ ಮಾಡಿರುವ ಈ ಟ್ವೀಟ್‌ಗೆ ನಾಗ ಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. ‘’ಥ್ಯಾಂಕ್ಸ್ ಸ್ಯಾಮ್’’ ಎಂದು ನಾಗ ಚೈತನ್ಯ ರಿಪ್ಲೈ ಮಾಡಿದ್ದಾರೆ. ಅಲ್ಲಿಗೆ, ಸಮಂತಾ ಮತ್ತು ನಾಗ ಚೈತನ್ಯ ಒಂದಾಗಿದ್ದಾರೆ ಅಂತ ಕಟ್ಟಾ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top