fbpx
ಸಮಾಚಾರ

ಟಿ20 ತಂಡದ ನಾಯಕತ್ವ ಬಿಡಲಿದ್ದೇನೆ: ವಿರಾಟ್‌ ಕೊಹ್ಲಿ ಅಧಿಕೃತ ಘೋಷಣೆ!

ಕೆಲವು ದಿನಗಳಿಂದ ಟೀಂ ಇಂಡಿಯಾದ ನಾಯಕತ್ವದ ಬಗ್ಗೆ ಕೇಳಿ ಬರುತ್ತಿದ್ದ ವದಂತಿಗಳಿಗೆ ಅಂತಿಮವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆರೆ ಎಳಿದಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ತಮ್ಮ ಅಧಿಕೃತ ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಕೊಹ್ಲಿ ಟಿ20 ವಿಶ್ವಕಪ್ ನಂತರ ಟಿ20 ಮಾದರಿಯ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

 

 

ಕೆಲ ದಿನಗಳ ಹಿಂದಷ್ಟೇ ವಿರಾಟ್‌ ಕೊಹ್ಲಿ, ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಬಳಿಕ ಒಡಿಐ ಮತ್ತು ಟಿ20 ತಂಡಗಳ ನಾಯಕತ್ವ ಬಿಡಲಿದ್ದಾರೆ ಎಂದು ವರದಿಗಳಾಗಿತ್ತು. ಈ ಬೆಳವಣಿಗೆಯನ್ನು ಬಿಸಿಸಿಐ ತಳ್ಳಿ ಹಾಕಿತ್ತು ಕೂಡ. ಈಗ ಖುದ್ದಾಗಿ ವಿರಾಟ್‌ ಕೊಹ್ಲಿ ಈ ಸುದ್ದಿ ಸ್ಫೋಟ ಮಾಡಿದ್ದು, ವಿಶ್ವಕಪ್‌ ಬಳಿಕ ಕೇವಲ ಟಿ20 ತಂಡದ ನಾಯಕತ್ವದಿಂದ ಕೆಳೆಗಿಳಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್‌ ಕ್ರಿಕೆಟ್‌ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ಈ ಸಂಗತಿ ಹೇಳಿಕೊಂಡಿದ್ದಾರೆ. ಉದ್ದ ಸಂದೇಶ ಬರೆದುಕೊಂಡಿರುವ ಕೊಹ್ಲಿ, ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಬಳಿಕ ತಾನು ಟಿ20 ನಾಯಕತ್ವದದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕೊಹ್ಲಿ, ‘ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶವಷ್ಟೇ ಅಲ್ಲ, ಟೀಮ್ ಇಂಡಿಯಾವನ್ನು ಮುನ್ನಡೆಸುವ ಅದೃಷ್ಟವೂ ಸಿಕ್ಕಿತ್ತು. ಟೀಮ್ ಇಂಡಿಯಾದ ನಾಯಕನಾಗಿದ್ದಾಗ ನನಗೆ ಬೆಂಬಲಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ತಂಡದ ಸಹ ಆಟಗಾರರು, ಬೆಂಬಲ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ಕೋಚ್‌ಗಳು ಮತ್ತು ನಮ್ಮ ಗೆಲುವಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯನಿಗೂ ಧನ್ಯವಾದ. ನೀವಿಲ್ಲದೆ ನಾನೀ ಪ್ರಯಾಣ ಪೂರ್ಣಗೊಳಿಸಲಾಗುತ್ತಿರಲಿಲ್ಲ’ ಎಂದು ಟ್ವೀಟ್‌ ಪೋಸ್ಟ್‌ನ ಆರಂಭಿಕ ಪ್ಯಾರದಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top