fbpx
ಸಮಾಚಾರ

ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಸುಂದರವಾಗಿ ಆಚರಿಸಿದ ನಟಿ ಮುಯೂರಿ

ಮದುವೆ ಆದ ನಂತರ ಸಂಸಾರದ ತಾಪತ್ರಯಗಳಲ್ಲಿ ಮುಳುಗಿಹೋಗಿರುವ ಸ್ಯಾಂಡಲ್‍ವುಡ್ ನಟಿ ಮಯೂರಿಯ ಸದ್ಯ ತಾಯ್ತನದದ ಸಂತಸ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಸದ್ಯ ಅವರ ಮುದ್ದು ಕಂದ ಆರವ್‍ಗೆ 6 ತಿಂಗಳು ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

“ಒಳ್ಳೆಯದರೊಂದಿಗೆ ಒಳ್ಳೆಯ ಕೊನೆಗೊಳ್ಳುತ್ತದೆ. ಆರವ್‍ಗೆ 6 ತಿಂಗಳು ಎಂದು ಬರೆದುಕೊಂಡು” ತಮ್ಮ ಮಗನಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಮಗ ಹಾಗೂ ಗಂಡನ ಜೊತೆ ಸುಂದರ ಫೋಟೋಶೂಟ್‍ಗೆ ಪೋಸ್ ಕೊಟ್ಟಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದಾರೆ.

ಮದುವೆಯಾದಾಗಿನಿಂದಲೂ ಚಿತ್ರರಂಗದಿಂದ ದೂರವಿರುದ ಮಯೂರಿ ಅವರು ಈಗ ಮಗುವಿನ ಆರೈಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಯೂರಿ ಅವರಿಗೆ ಮಗುವಾಗಿ 6 ತಿಂಗಳು ಕಳೆದಿದೆ. ಮಗನಿಗೆ ಆರವ್ ಎಂದು ನಾಮಕರಣ ಮಾಡಿರುವ ಮಯೂರಿ ಹಾಗೂ ಅರುಣ್ ದಂಪತಿ ಮಗನ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top