fbpx
ಸಮಾಚಾರ

ಮೇಘನಾ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ: ಸಿಡಿದೆದ್ದ ಒಳ್ಳೆಹುಡ್ಗ ಪ್ರಥಮ್

ಸಾಮಾಜಿಕ ಜಾಲತಾಣ ಎಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಯೂಟೂಬ್ ಎಂಬುದು ಫೇಕ್ ಸುದ್ದಿಗಳ ಫ್ಯಾಕ್ಟರಿಯಾಗಿ ಬೆಳೆದುಕೊಂಡಿದೆ. ಅಲ್ಲಿ ಸತ್ಯಂಶಗಳಿಗಿಂತ ಸುಳ್ಳು ಸುದ್ದಿಗಳ ಆರ್ಭಟವೇ ಹೆಚ್ಚು. ಸೆಲೆಬ್ರೆಟಿಗಳ ಕಷ್ಟದಲ್ಲಿ ಬೇಳೆ ಬೇಯಿಸಿಕೊಳ್ಳಲೆಂದೇ ಹೊಂಚಿಕೂತ ಯೂಟೂಬ್ ಚಾನೆಲ್ ವಿಕೃತ ಮನಸಿನ ಕ್ರಿಮಿಗಳ ಹಿಂಡೊಂದು ಜಮೆಯಾಗಿದೆ.

 

 

ಕೆಲವು ಯೂಟ್ಯೂಬ್ ವಾಹಿನಿಗಳು ಮೇಘನಾ ರಾಜ್‌ ಕುಟುಂಬಕ್ಕೆ ಸಂಬಂಧಿಸಿದಂತೆ ತೀರಾ ವೈಯಕ್ತಿಕ ವಿಚಾರಗಳಲ್ಲಿ ಬೇಕಂತಲೇ ತಪ್ಪು ಮಾಹಿತಿ ನೀಡುತ್ತಿದೆ. ಸುಳ್ಳು ಸುದ್ದಿಗಳ ಕವರ್ ಫೋಟೋಗಳನ್ನು ಪ್ರಕಟಿಸಿ ಸುಳ್ಳು ಸುದ್ದಿಗಳನ್ನ ಹರಡಿಸುತ್ತಿವೆ.. ಈ ಬಗ್ಗೆ ಮೇಘನಾ ರಾಜ್ ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಬೇಸರ ಹೊರಹಾಕಿದ್ದರು. ಇದೀಗ ಮತ್ತೆ ಮೇಘನಾ ಮರುಮದುವೆ ಕುರಿತು ಯೂಟ್ಯೂಬ್ ವಾಹಿನಿಯೊಂದು ಸುಳ್ಳು ವಿಡಿಯೋ ಅಪ್‌ಲೋಡ್ ಮಾಡಿದೆ.

ಇದನ್ನುಬಿಗ್ ಬಾಸ್ ವಿನ್ನರ್ ಪ್ರಥಮ್ ಉಗ್ರವಾಗಿ ಖಂಡಿಸಿದ್ದು ಸದರಿ ಯೂಟ್ಯೂಬ್ ಚಾನೆಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೇಘನಾ ಅವರಿಗೆ ಮನವಿ ಮಾಡಿದ್ದಾರೆ. ”ನಾನ್ ನೋಡಿದ್ರೂ ignore ಮಾಡೋಣ ಅಂತಿದ್ದೆ!! ಬಟ್ ಒಂದು ದಿನದಲ್ಲಿ 2.70 ಲಕ್ಷ ವೀಕ್ಷಣೆ ಕಂಡಿದೆ !! ವೀವ್ಸ್ ಆಗ್ಲಿ, ದುಡ್ಡಾಗ್ಲಿ ಅಂತ ಈ ಮಟ್ಟಕ್ಕೆ ಈ ಯೂಟ್ಯೂಬ್ ಚಾನಲ್ ಇಳಿದಾಗ ಸ್ವಲ್ಪ ಕಾನೂನಾತ್ಮಕವಗಿ ನೋಡಬೇಕಗುತ್ತದೆ! ಮೇಘನಾ ರಾಜ್ ಇಂತಹ ಒಂದು ಚಾನಲ್‌ನ ನೀವು ಕಾನೂನಾತ್ಮಕವಗಿ ಡಿಲೀಟ್ ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತರೆ” ಎಂದು ಪ್ರಥಮ್ ಟ್ವಿಟರ್ ನಲ್ಲಿ ಮೇಘನಾ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆ ಸುದ್ದಿಯಲ್ಲಿ ಇದ್ದಿದ್ದೆನು?
ಯೂಟ್ಯೂಬ್ ಚಾನಲ್‌ನಲ್ಲಿ ‘ಎರಡನೇ ಮದುವೆ ಸದ್ಯದಲ್ಲೇ ಆಗ್ತೀನಿ, ಹುಡುಗ ಯಾರು ಅಂತ ಹೇಳ್ತೇನೆ’ ಎಂದು ಮೇಘನಾ ಹೇಳಿರುವಂತೆ ಕವರ್ ಇಮೇಜ್ ನಲ್ಲಿ ಹೆಡ್‌ಲೈನ್ ಬಳಸಲಾಗಿದೆ. ಆದರೆ ವಿಡಿಯೋದಲ್ಲಿ ಹೆಡ್ ಲೈನ್ ಗೆ ಸಂಭಂದಿಸಿದ ಯಾವುದೇ ವಿಚಾರವಿಲ್ಲ. ಇದು ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top