fbpx
ಸಮಾಚಾರ

ಉಪೇಂದ್ರ ಹೊಸ ಸಿನಿಮಾದ ಟೈಟಲ್​ಗೆ ವಿರೋಧ: ಉಪ್ಪಿಗೆ ಹಿಂದೂ ಸಂಘಟನೆಯಿಂದ ವಾರ್ನಿಂಗ್

ಉಪೇಂದ್ರ ಅವರ ನಿರ್ದೇಶನದ ಮುಂದಿನ ಸಿನಿಮಾ ಎಂದು ಭಾರಿ ಸುದ್ದಿಯಾಗಿರುವ 2 ಬಿಳಿ, 1 ಕೆಂಪು ನಾಮದ ಟೈಟಲ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಎಲ್ಲಿಯೂ ಅಧಿಕೃತ ಘೋಷಣೆಯಾಗಿಲ್ಲವಾದರೂ ಗಾಂಧಿನಗರದ ತುಂಬೆಲ್ಲಾ ‘ಮೂರು ನಾಮ’ದ ಸಿಂಬಲ್ ಇರುವ ಚಿತ್ರವೇ ಉಪ್ಪ್ಪಿಯ ಮುಂದಿನ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ.

 

 

ವೈರಲ್ ಆಗಿರುವ ಟೈಟಲ್ ಪೋಸ್ಟರ್​ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹಿಂದೂ ಮಹಾಸಭಾ, ಹಿಂದೂರಾಷ್ಟ್ರ ಸೇನಾ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿದೆ. ಚಿತ್ರಕ್ಕೆ ‘ಮೂರು ನಾಮದ ಸಿಂಬಲ್ ಅನ್ನು ಟೈಟಲ್ ಮಾಡಿದರೆ ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ ಎಂಬುದು ಹಿಂದೂ ಪರ ಸಂಘಟನೆಗಳ ವಾದ. ಹಾಗಾಗಿ ಈ ಚಿತ್ರಕ್ಕೆ ‘ಮೂರು ನಾಮದ’ ಟೈಟಲ್ ಇಡದಂತೆ ಆಗ್ರಹಿಸುತ್ತಿವೆ.

ಅಂದಹಾಗೆ ಸಿನಿಮಾದ ಪೋಸ್ಟರ್‌ನಲ್ಲಿ ಹೆಸರಿನ ಬದಲಿಗೆ ತಿರುಪತಿ ನಾಮವಷ್ಟೆ ಕಾಣುತ್ತಿದೆ. ಆದರೆ ಆ ನಾಮವು ಇಂಗ್ಲೀಷ್‌ನ ಯು (U) ಎಂದು ಅರ್ಥೈಸಿಕೊಳ್ಳಬಹುದು. ಮಧ್ಯದಲ್ಲಿ ಕೆಂಪು ಬಣ್ಣದ ನಾಮವನ್ನು ಇಂಗ್ಲೀಷ್‌ನ ಐ (I) ಎಂದು ಅರ್ಥೈಸಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top