fbpx
ಸಮಾಚಾರ

ಸೆಪ್ಟೆಂಬರ್ 18: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 18, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ 6:53 am ತ್ರಯೋದಶೀ 5:59 am
ನಕ್ಷತ್ರ : ಧನಿಷ್ಠ 3:21 am
ಯೋಗ : ಸುಕರ್ಮ 6:24 pm
ಕರಣ : ಬಾಲವ 6:53 am ಕುಲವ 6:23 pm

Time to be Avoided
ರಾಹುಕಾಲ : 9:12 am – 10:43 am
ಯಮಗಂಡ : 1:43 pm – 3:14 pm
ದುರ್ಮುಹುರ್ತ : 6:12 am – 7:00 am, 7:00 am – 7:48 am
ವಿಷ : 7:33 am – 9:08 am
ಗುಳಿಕ : 6:12 am – 7:42 am

Good Time to be Used
ಅಮೃತಕಾಲ : 5:03 pm – 6:38 pm
ಅಭಿಜಿತ್ : 11:49 am – 12:37 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:18 pm
ರವಿರಾಶಿ : ಕನ್ಯ
ಚಂದ್ರರಾಶಿ : ಮಕರ upto 15:26

 

 

 

ನೇರವಾಗಿ ನಿಮ್ಮ ಯೋಜನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಳ್ಳಿರಿ. ಸಾರ್ವಜನಿಕ ಮನ್ನಣೆಯೇ ನಿಮಗೆ ನೆರವು ನೀಡುವುದು. ಇದರಿಂದ ಹಣಕಾಸಿನ ತೊಂದರೆ ಕಡಿಮೆ ಆಗುವುದು.

ಮನದ ಸಂಕಲ್ಪಕ್ಕೆ ವಿಘ್ನಗಳು ಬರುತ್ತವೆ. ಎದೆಗುಂದದಿರಿ. ನಿಮ್ಮನ್ನು ಟೀಕಿಸುವವರು ಬಹಳ ಮಂದಿ. ಹಾಗಾಗಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರಿ. ಆದಷ್ಟು ದೇವರ ಸೇವೆ ಮಾಡಿರಿ.

ನೀವು ಸರಳವಾಗಿ ಇಡಬೇಕೆಂಬ ಹೆಜ್ಜೆಗಳು ತಪ್ಪಾಗುವ ಸಂಭವ ಜಾಸ್ತಿ. ನಿಮ್ಮ ಜಾಣ್ಮೆ ತರ್ಕಗಳು ಇಂದು ಉಪಯೋಗಕ್ಕೆ ಬರುವುದಿಲ್ಲ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.

ನಿಮ್ಮನ್ನು ಎದುರಿಗೆ ಹೊಗಳಿ ಹಿಂದೆ ತೆಗಳುವ ಮಂದಿಯೇ ಜಾಸ್ತಿ. ಹಾಗಾಗಿ ಇಂತಹ ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ಆಸ್ತಿಯ ವಿಷಯದ ಬಗ್ಗೆ ತಕರಾರು ಎದುರಿಸಬೇಕಾಗುವುದು.

 

ಬಾಳಸಂಗಾತಿಯು ನಿಮ್ಮ ವಿಚಾರದಲ್ಲಿ ಪ್ರಸನ್ನತೆ ಪ್ರದರ್ಶಿಸಲಿದ್ದಾರೆ. ಅವರು ಕೊಡುವ ಸಲಹೆಗಳನ್ನು ಸ್ವೀಕರಿಸಿ. ಇದಕ್ಕಿಂತ ಹೆಚ್ಚಿನ ಸಂತೋಷ ಜೀವನದಲ್ಲಿ ಇರುವುದಿಲ್ಲ. ಮಕ್ಕಳು ಸಹ ನಿಮ್ಮ ವಿಚಾರಗಳನ್ನು ಗೌರವಿಸಿ ಪಾಲಿಸುವರು.

 

ಕಠಿಣ ದುಡಿಮೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂದರು ಹಿರಿಯರು. ಹಾಗಾಗಿ ಈ ದಿನ ನಿಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಮತ್ತು ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

 

ಮಾತುಗಾರಿಕೆಯ ಪ್ರಭಾವದಿಂದ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುವಿರಿ. ಈ ದಿನ ನಿಮ್ಮ ಮಾತಿಗೆ ಎಲ್ಲೆಡೆ ಗೌರವ ಲಭಿಸುವುದು. ಅಂತೆಯೆ ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದರಿಂದ ಕೌಟುಂಬಿಕ ಜೀವನಕ್ಕೆ ಧಕ್ಕೆ ಇರುವುದಿಲ್ಲ.

 

ಹಳೆಯ ಸ್ನೇಹಿತನಿಂದ ಹಲವು ನಿಟ್ಟಿನ ಮಾರ್ಗದರ್ಶನ ದೊರಯುವುದು. ಮತ್ತು ಈದಿನ ನಿಮಗೆ ಬರಬೇಕಾಗಿದ್ದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಭಾಗ ನಿಮ್ಮ ಕೈಸೇರುವುದರಿಂದ ಸ್ವಲ್ಪಮಟ್ಟಿನ ಸಮಸ್ಯೆ ತಗ್ಗುವುದು.

 

ಎಲ್ಲಾ ದಿನಗಳೂ ವಸಂತಕಾಲವಾಗಿರಲು ಸಾಧ್ಯವಿಲ್ಲ. ಅಂತೆಯೇ ಪ್ರತಿನಿತ್ಯವೂ ನಿಮ್ಮ ಮಾತಿಗೆ ಎಲ್ಲರೂ ತಲೆಬಾಗಬೇಕೆಂಬ ಅಲಿಖಿತ ಮನೋಭಾವನೆಯಿಂದ ಹೊರಬನ್ನಿರಿ. ಈ ದಿನ ಸೋತು ಗೆಲ್ಲುವುದು ಉತ್ತಮ.

ಎಲ್ಲರೂ ನಿಮ್ಮ ಕಡೆ ಬೊಟ್ಟು ಮಾಡಿ ತೋರಿಸುತ್ತಾ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವರು. ಅದಕ್ಕೆ ಅಂಜದಿರಿ. ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಇದೆಲ್ಲವೂ ಸಹಜ. ನಿಮ್ಮ ದೃಢ ನಿಲುವಿನಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ.

 

 

ಯಾವುದೋ ಸಹಜವಾದ ಮಾತು ಎದುರಾಳಿಯನ್ನು ಕೆರಳಿಸಬಹುದು. ಅದಕ್ಕಾಗಿ ನೀವು ಆತನನ್ನು ಪರಿಪರಿಯಾಗಿ ಒಪ್ಪಿಸಬೇಕಾಗುವುದು. ಸ್ನೇಹಿತನ ಮಧ್ಯಸ್ಥಿಕೆಯಿಂದ ಭಿನ್ನಾಭಿಪ್ರಾಯ ಶಮನ ಆಗುವುದು.

ಎಲ್ಲಾ ಕಾರ್ಯಗಳು ನಿಮ್ಮ ಅನಿಸಿಕೆಯಂತೆ ಆಗುತ್ತಿರುವುದರಿಂದ ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲನ್ನು ಏರುವಿರಿ. ಈ ಯಶಸ್ಸಿನಲ್ಲಿ ನಿಮ್ಮ ಸಂಗಾತಿಯ ಪಾಲು ಇರುವುದನ್ನು ಮರೆಯದಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top