fbpx
ಸಮಾಚಾರ

ಶ್ರೇಯಸ್ ಅಯ್ಯರ್​ಗೆ ದೊಡ್ಡ ಆಘಾತ

ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಐಪಿಎಲ್ 2021ರ ದ್ವಿತೀಯಾರ್ಧ ಪಂದ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಐಪಿಎಲ್ ತಂಡಗಳು ಸಕಲ ತಯಾರಿ ನಡೆಯುತ್ತಿದೆ.. ಈ ಮದ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಅಯ್ಯರ್ ಅವರಿಗೆ ದೊಡ್ದು ಆಘಾತ ಎದುರಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಂಡದ ನಾಯಕತ್ವದ ಕುರಿತು ಸ್ಪಷ್ಟನೆ ನಿಡಿದೆ. ಶ್ರೇಯಸ್‌ ಅಯ್ಯರ್‌ ತಂಡಕ್ಕೆ ಮರಳಿದರೂ ರಿಷಭ್‌ ಪಂತ್‌ ಅವರೇ ನಾಯಕತ್ವದ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಫ್ರಾಂಚೈಸಿಯ ಸಹ ಮಾಲಕ ಪಾರ್ಥ್ ಜಿಂದಲ್‌ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಅಯ್ಯರ್​ಗೆ ದೊಡ್ಡ ಹಿನ್ನಡೆಯಾಗಿದೆ.

ಇಂಗ್ಲೆಂಡ್‌ ಸರಣಿಯ ವೇಳೆ ಶ್ರೇಯಸ್‌ ಅಯ್ಯರ್‌ ಗಾಯಾಳಾಗಿ ಹೊರಬಿದ್ದ ಬಳಿಕ 2021ರ ಐಪಿಎಲ್‌ಗೆ ರಿಷಭ್‌ ಪಂತ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಐಪಿಎಲ್‌ ಮೊದಲಾರ್ಧದಲ್ಲಿ ಡೆಲ್ಲಿ ನಿರ್ವಹಣೆ ಗಮನಾರ್ಹ ಮಟ್ಟದಲ್ಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಾಗಿ ಪಂತ್‌ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.

ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಶ್ರೇಯಸ್‌ ಅಯ್ಯರ್‌ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿಲ್ಲ. ನೇರವಾಗಿ ಐಪಿಎಲ್‌ ಆಡುವುದರಿಂದ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ತಂಡದ ಉದ್ದೇಶವಾಗಿರಲೂಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top