fbpx
ಸಮಾಚಾರ

ನಾನಿನ್ನೂ ಬದುಕುವುದಿಲ್ಲ: ನಟಿ ವಿಜಯಲಕ್ಷ್ಮೀ ಅತಂಕ

ಚಿತ್ರರಂಗದಿಂದ ಸಂಪೂರ್ಣ ಮರೆಯಾಗಿ ಆಗಾಗ ವಿಡಿಯೊಗಳನ್ನ ಮಾಡುತ್ತಲೇ ಹೆಚ್ಚು ಸುದ್ದಿಯಲ್ಲಿರುವ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಈಗ ಹೊಸ ವಿಡಿಯೋ ಹಂಚಿಕೊಂಡಿದ್ದು, ತನಗೆ ಕೊರೊನಾ ಸೋಂಕು ಬಂದಿದೆ. ನಾನು ಉಳಿಯುವಂತೆ ಕಾಣುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

’ನನಗೆ ಐದು ದಿನಗಳಿಂದ ವಿಪರೀತ ಜ್ವರ ಇತ್ತು, ವಾಂತಿ ಮಾಡಿಕೊಳ್ಳುತ್ತಿದ್ದೆ. ಈಗ ನಾನು ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ನನಗೆ ಕೊರೊನಾ ಆಗಿದೆ, ನ್ಯುಮೋನಿಯಾ ಆಗಿದೆ ಎಂದು ತಿಳಿಸಿದ್ದಾರೆ. ನಾನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬೇಕಿದೆ. ಐದು ದಿನದಿಂದ ನಾನು ಸರಿಯಾಗಿ ಊಟವನ್ನೂ ಮಾಡಿಲ್ಲ.

ನಾನು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಸಹಾಯಕ್ಕಾಗಿ ಕಲಾವಿದರ ಸಂಘಕ್ಕೆ ಸಹಾಯ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ದಯವಿಟ್ಟು ಇದನ್ನ ಗಂಭೀರವಾಗಿ ತೆಗೆದುಕೊಳ್ಳಿ. ಅಭಿಮಾನಿಗಳೇ ನೀವು ತಿಳಿದುಕೊಳ್ಳಬೇಕು ಎಲ್ಲರೂ ಸೇರಿ ನನ್ನನ್ನು ಮರ್ಡರ್ ಮಾಡಿದಂತೆ ನನ್ನ ಕಥೆ ಮುಗಿಸಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ. ನನಗೆ ಇದರ ಮುಂದೆ ಶಕ್ತಿ ಇಲ್ಲ. ಯಾರ ಸಹಾಯವು ಸಿಗುತ್ತಿಲ್ಲ. ಎಲ್ಲರಲ್ಲೂ ಸಹಾಯ ಕೇಳಿ ಸುಸ್ತಾಗಿದ್ದೇನೆ ಎಂದಿದ್ದಾರೆ.

ನಾನು ಸತ್ತು ಹೋದರೆ ಇವರೆಲ್ಲರೂ ಸೇರಿ ಸಾಯಿಸಿದರು ಅಂತ ಗಂಭೀರವಾಗಿ ತೆಗೆದುಕೊಳ್ಳಿ. ಸಹಾಯ ಮಾಡದೇ ನನ್ನನ್ನು ಸಾಯಿಸುತ್ತಿದ್ದಾರೆ. ನಾನು ಉಳಿತೀನಾ ಇಲ್ಲವಾ ನನಗೆ ಗೊತ್ತಿಲ್ಲ ಎಂದು ಅಭಿಮಾನಿಗಳಲ್ಲಿ ದುಃಖ ತೊಡಿಕೊಂಡಿದ್ದಾರೆ. ಈ ಹಿಂದೆಯೂ ನಟಿ ವಿಜಯ ಲಕ್ಷ್ಮೀ ಸಾಕಷ್ಟು ಬಾರಿ ಸಹಾಯವನ್ನು ಸಿನಿಮಾ ಮಂದಿಯಲ್ಲಿ ಕೇಳಿದ್ದರು. ಯಾರು ಸ್ಪಂದಿಸದೆ ಇದ್ದಾಗ ಅವರ ವಿರುದ್ದವೂ ವಿಡಿಯೋದಲ್ಲಿ ಮಾತನಾಡಿ ತಮ್ಮ ಕೋಪ ಹಾಗೂ ಅಸಹಾಯಕತೆಯನ್ನು ಹೊರ ಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top