fbpx
ಸಮಾಚಾರ

ರಾಮ್ ಗೋಪಾಲ್ ವರ್ಮಾ-ಉಪೇಂದ್ರ ಒಟ್ಟಿಗೆ ಸಿನಿಮಾ: ಅಧಿಕೃತ ಘೋಷಣೆ

ರಿಯಲ್ ಸ್ಟಾರ್ ಉಪೇಂದ್ರರವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರು ಉಪೇಂದ್ರ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಹಾಗೂ ಉಪೇಂದ್ರ ಕಾಂಬೀನೇಷನ್‍ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಲಿದೆ.

 

ಈ ಕುರಿತಂತೆ ಸ್ವತಃ ರಾಮ್ ಗೋಪಾಲ್ ವರ್ಮಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಹಾಗೂ ಉಪೇಂದ್ರರವರು ಶೀಘ್ರವೇ ಆ್ಯಕ್ಷನ್ ಸಿನಿಮಾವನ್ನು ಮಾಡಲಿದ್ದೇವೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ತಿಳಿಸಿದ್ದಾರೆ.

ಈ ಮುನ್ನ 2016ರಲ್ಲಿ ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ರಾಮ್‍ಗೋಪಾಲ್ ವರ್ಮಾರವರು ಇದೀಗ ಉಪೇಂದ್ರ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಇಲ್ಲಿಯವರೆಗೂ ಹಿಂದಿ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top