fbpx
ಸಮಾಚಾರ

ಪೂಜೆ ಮಾಡ್ಬೇಕು ಪ್ಲೀಸ್​ ಬಿಟ್ಬಿಡಿ ಎಂದು ಅಧಿಕಾರಿಗಳ ಕಾಲಿಗೆ ಬಿದ್ರೂ ಡಾ.ವಿಷ್ಣು ಪ್ರತಿಮೆ ತೆರವು

ಕನ್ನಡ ಚಿತ್ರರಂಗದ ಮೇರು ನಟ, ಅಭಿಮಾನಿಗಳ ಆರಾಧ್ಯದೈವ ಡಾ.ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇದ್ದರೂ ಅವರ ಮೇಲಿನ ಅಭಿಮಾನಿಗಳ ಪ್ರೀತಿಗೆ ಎಳ್ಳಷ್ಟೂ ಕಡಿಮೆ ಆಗಿಲ್ಲ.. ವಿಷ್ಣು ಹುಟ್ಟುಹಬ್ಬವನ್ನು ಈಗಲೂ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಇಂದು ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬ, ಈ ಹಂಗವಾಗಿ ಅಭಿಮಾನಿಗಳು ವಿಷ್ಣು ಫೋಟೋ, ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.

ಈ ಮದ್ಯೆ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತೆರವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪಾಲಿಕೆಯ ಅನುಮತಿ ಪಡೆಯದೆ ಅಭಿಮಾನಿಗಳು ರಾತ್ರೋರಾತ್ರಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಪ್ರತಿಷ್ಠಾಪಿಸಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಎಸಿಪಿ‌ ಶಿವಶಂಕರ್ ಪರಿಶೀಲನೆ ನಡೆಸಿದರು. ಪ್ರತಿಮೆಯನ್ನು ಕಳಚಿ, ಬಿಡಿ ಭಾಗಗಳಾಗಿ ಮಾಡಿ ಪ್ರತಿಮೆಯನ್ನು ತೆರವು ಮಾಡಿ ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ.

ಪೂಜೆ ನೆರವೇರಿಸುವವರೆಗಾದರೂ ಉಳಿಸುವಂತೆ ಪಾಲಿಕೆ ಅಧಿಕಾರಿಗಳ ಕಾಲಿಗೆ ಬಿದ್ದು ಅಭಿಮಾನಿಗಳು ಕೇಳಿಕೊಂಡರು. ಅಭಿಮಾನಿಗಳ ಮನವಿಗೂ ಕಿವಿಗೊಡದ ಪೊಲೀಸರು ವಿಷ್ಣು ಪ್ರತಿಮೆಯನ್ನು ತೆರವು ಮಾಡಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top