fbpx
ಸಮಾಚಾರ

‘ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ’ ಗೂಳಿಹಟ್ಟಿ ಶೇಖರ್ ನೋವು

‘ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ’ ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ತೋಡಿಕೊಂಡ ಮಂಗಳವಾರ ಘಟನೆ ನಡೆಯಿತು.‌

ಹೊಸದುರ್ಗದಲ್ಲಿ 18-20 ಸಾವಿರ ಜನರ ಮತಾಂತರ ಆಗಿದೆ. ಕ್ರಿಶ್ಚಿಯನ್ ಮಿಷನರಿಗಳು, ಜನರನ್ನು ಬ್ರೇನ್ ವಾಶ್ ಮಾಡುತ್ತಿವೆ’ ಎಂದು ಹೇಳಿದರು. ಇದಕ್ಕೆ ಜಾರ್ಜ್ ಪ್ರತಿಕ್ರಿಯಿಸಿ, ಎಲ್ಲಾ ಚರ್ಚ್‌ಗಳ ವಿರುದ್ಧ ಆರೋಪ ಮಾಡಬೇಡಿ. ಮತಾಂತರ ಮಾಡಿದ ಚರ್ಚ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದಿದ್ದಾರೆ.

ನನ್ನ ಹೆತ್ತ ತಾಯಿಯನ್ನು ಕೂಡಾ ಮತಾಂತರ ಮಾಡಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳಲ್ಲಿ ಬ್ರೈನ್ ವಾಷ್ ಮಾಡಲಾಗ್ತಿದೆ. ಮನೆಯಲ್ಲಿ ಕುಂಕುಮ ಇಡಬಾರದು ಅಂತಾ ಹೇಳಿ ಕಳಿಸಿದ್ದಾರೆ.‌ ನನ್ನ ತಾಯಿಯ ಮೊಬೈಲ್ ರಿಂಗ್ ಟೋನ್ ಕೂಡಾ ಕ್ರಿಶ್ಚಿಯನ್ ಹಾಡುಗಳಿವೆ. ನಮ್ಮ ಮನೆಯಲ್ಲಿ ಪೂಜೆ ಮಾಡುವ ಅವಕಾಶವನ್ನೇ ಕಳೆದುಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top