fbpx
ಸಮಾಚಾರ

ಚಿರು ಇರುವ ವಿಶೇಷ ಜಾಕೆಟ್‌ ಧರಿಸಿ ಸೈಮಾ ಅವಾರ್ಡ್ ಪಡೆದ ನಿರ್ದೇಶಕ ಪನ್ನಗಾಭರಣ!

ಚಿರಂಜೀವಿ ಸರ್ಜಾ ಆಪ್ತ ಗೆಳೆಯರ ಬಳಗದಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಯುವ ನಿರ್ದೇಶಕ ಪನ್ನಗಾಭರಣ ಚಿರುವನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಸೈಮಾ ಅವಾರ್ಡ್ 2021 ಕಾರ್ಯಕ್ರಮದಲ್ಲಿ ಪನ್ನಗಾಭರಣ ಬೆಸ್ಟ್‌ ಡೈರೆಕ್ಟರ್ ಆಫ್ 2020 ಪ್ರಶಸ್ತಿ ಗೆದ್ದಿದ್ದಾರೆ. ವೇದಿಕೆ ಮೇಲೆ ಪ್ರಶಸ್ತಿ ಪಡೆದ ಪನ್ನಗಾ ತಾವು ಚಿರು ಫೋಟೋಗಳಿರುವ ಬ್ಲೇಜರ್
ಅನ್ನು ಧರಿಸಿದ್ದರು.

ಕಾರ್ಯಕ್ರಮದಲ್ಲಿ ಪನ್ನಗ ಧರಿಸಿದ್ದ ಬ್ಲಾಕ್ ಬ್ಲೇಝರ್. ಆ ಬ್ಲೇಝರ್‌ನ ಕಾಲರ್‌ ಬಿಳಿ ಬಣ್ಣವಿದ್ದು, ಚಿರು ಮುಖವನ್ನು ಪ್ರಿಂಟ್‌ ಮಾಡಿಸಲಾಗಿದೆ. ‘ನನ್ನ ಲಕ್ಕಿ ಚಾರ್ಮ್‌ ಸ್ನೇಹಿತನನ್ನು ಧರಿಸಿರುವೆ,’ ಎಂದು ಬರೆದು ಕೊಂಡಿದ್ದಾರೆ. ಈ ಡಿಸೈನರ್ ಉಡುಪಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅಂದಹಾಗೆ ಚಿರಂಜೀವಿ ಸರ್ಜಾ ಅಗಲಿದ ನಂತರ ಮೇಘಾನ ರಾಜ್‌ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತ ಬಾಲ್ಯದ ಗೆಳೆಯ ಪನ್ನಗಾಭರಣ ಬಗ್ಗೆ ಅನೇಕರಿಗೆ ಗೊತ್ತಿದೆ. ಈಗಲೂ ತಮ್ಮ ಮನೆಯಲ್ಲಿ ಚಿರು ಫೋಟೋ ಇಟ್ಟುಕೊಂಡು, ತಮ್ಮ ಸ್ನೇಹವನ್ನು ಸ್ಮರಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top