fbpx
ಸಮಾಚಾರ

ಅಪಘಾತದಲ್ಲಿ ಯುವನಟಿ ಈಶ್ವರಿ ದುರ್ಮರಣ

ಮರಾಠಿಯ ಯುವ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಟಿ ಈಶ್ವರಿ ದೇಶಪಾಂಡೆ( 25) ಮೃತರಾಗಿದ್ದಾರೆ. ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈಶ್ವರಿ ದೇಶಪಾಂಡೆ ದುರಂತ ಸಾವನ್ನಪಿದ್ದಾರೆ. ಗೆಳೆಯ ಜೊತೆಗೆ ಗೋವಾಗೆ ಬಂದಿದ್ದ ನಟಿ ಈಶ್ವರಿ ದೇಶಪಾಂಡೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಮರಾಠಿ ನಟಿ ಈಶ್ವರಿ ದೇಶಪಾಂಡೆ ಮತ್ತು ಗೆಳೆಯ ಶುಭಂ ದಡ್ಗೆ ಒಟ್ಟಿಗೆ ಕಾಲ ಕಳೆಯಲು ಟ್ರಿಪ್ ಪ್ಲಾನ್ ಮಾಡಿದ್ದರು. ಇಬ್ಬರೂ ಕಾರಿನಲ್ಲಿ ಗೋವಾಗೆ ತೆರಳಿದ್ದರು. ಕಳೆದ ಸೆಪ್ಟೆಂಬರ್ 15ರಂದೇ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಗೋವಾಗೆ ಬಂದಿದ್ದರು. ಸೆಪ್ಟೆಂಬರ್ 20 (ಸೋಮವಾರ) ಬೆಳಗ್ಗೆ ಬಾರ್ಡೇಜ್ ತಾಲೂಕಿನ ಅರ್ಪೋರಾ ಬಳಿ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಕಾರು ಅಪಘಾತದಲ್ಲಿ 25 ವರ್ಷ ವಯಸ್ಸಿನ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಗೆಳೆಯ ಶುಭಂ ದಡ್ಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಗೋವಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಶುಭಂ ದಾಡ್ಗೆ ಕಾರನ್ನು ಚಾಲನೆ ಮಾಡುತ್ತಿದ್ದರು. ಅಂಜುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಸೂರಜ್ ಗವಾಸ್ ನೀಡಿರುವ ಮಾಹಿತಿಯ ಪ್ರಕಾರ, “ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಿಯಂತ್ರಣ ಕಳೆದುಕೊಂಡ ನಂತರ, ಕಾರು ಎದುರಿನ ಕಾರಿಡಾರ್​ಗೆ ಕುಟ್ಟಿ, ಮುಂದಕ್ಕೆ ಹೋಗಿ ಸಣ್ಣ ತೊರೆಯೊಂದಕ್ಕೆ ಬಿದ್ದಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ಕಾರನ್ನು ಹೊರತೆಗೆಯುವ ವೇಳೆಗೆ ಈರ್ವರೂ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top