fbpx
ಸಮಾಚಾರ

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೋಹಕ ತಾರೆ ರಮ್ಯಾ

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಸಿನಿಮಾದಿಂದ ದೂರಾಗಿ, ಈಗ ರಾಜಕೀಯದಲ್ಲೂ ಗ್ಯಾಪ್‌ ಪಡೆದುಕೊಂಡಿರುವ ರಮ್ಯಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟದ ಫೋಟೋಗಳನ್ನು ಹಂಚಿಕೊಳ್ಳುತ್ತ, ಸೆಲೆಬ್ರಿಟಿ ಸ್ನೇಹಿತರ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.

ರಮ್ಯಾ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಸಾಕಷ್ಟು ಮಂದಿ ಕಾದುಕೂತಿದ್ದಾರೆ.ಈಗಲೂ ರಮ್ಯಾ ಒಪ್ಪಿಗೆ ನೀಡಿದರೆ ಸಾಲು ಸಾಲು ಸಿನಿಮಾಗಳು ಅವರ ಕೈಸೇರಲಿವೆ. ಇದುವರೆಗೆ ಮೋಹಕ ತಾರೆ ರಮ್ಯಾ ಮಾತ್ರ ಮತ್ತೆ ಬಣ್ಣ ಹಚ್ಚುವುದರ ಕುರಿತು ಸ್ಪಷ್ಟವಾದ ನಿಲುವು ಪ್ರಕಟಿಸಿರಲಿಲ್ಲ. ಆದರೆ, ಇದೀಗ ಬೆಳ್ಳಿ ಪರದೆ ಮೇಲೆ ಮಿಂಚುವ ತುಡಿತ ಹೊರ ಹಾಕಿದ್ದಾರೆ.

ಇತ್ತೀಚಿಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮತ್ತೆ ಅಭಿನಯಿಸುವ ಬಗ್ಗೆ ಹೇಳಿಕೊಂಡಿದ್ದಾರೆ ರಮ್ಯಾ. “ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ. ಆದರೆ ನಿಜ ಹೇಳಬೇಕು ಎಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ. ನಾನು ಆಗಲ್ಲ, ಸಿನಿಮಾ ಮಾಡಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ತಾರೆ. ಜೀವನದಲ್ಲಿ ನಾವು ಎಂದಿಗೂ ಇಲ್ಲ ಅಂತ ಎಂದಿಗೂ ಹೇಳಲು ಆಗಲ್ಲ” ಎಂದು ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಡುವ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top