fbpx
ಸಮಾಚಾರ

ಹಿರಿಯ ಕಲಾವಿದೆ ಲಕ್ಷ್ಮಿ ದೇವಿ ಮನೆಗೆ ಭೇಟಿ ನೀಡಿ ನೆರವು ನೀಡಿದ ಸುಧಾರಾಣಿ ಅಂಡ್ ಟೀಮ್

ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮಿ ದೇವಿ ಅವರ ಮನೆಗೆ ಸುಧಾರಾಣಿ, ಶ್ರುತಿ, ಮಾಳವಿಕಾ ಅವರು ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ದಾರೆ. ಬಳಿಕ ಲಕ್ಷ್ಮಿದೇವಿ ಅವರಿಗೆ ಎಲ್ಲಾರೂ ಸೇರಿ ಸನ್ಮಾನ ಮಾಡಿದ್ದಾರೆ. ಹಿರಿಯ ನಟಿಯ ಮನೆಗೆ ಭೇಟಿ ನೀಡಿದ ವಿಚಾರದ ಬಗ್ಗೆ ನಟಿ ಸುಧಾರಾಣಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಹಾಗೆಯೆ ಲಕ್ಷ್ಮಿ ದೇವಿ ಅವರ ಜೊತೆಗೆ ಒಂದೆರೆಡು ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ.

 

 

 

ಸುಧಾರಾಣಿ ಅವರ ಇನ್ಸ್ಟಾ ಪೋಸ್ಟ್ ನ ಯಥಾವತ್ತು ರೂಪ ಈ ರೀತಿ ಇದೆ
ಯಾರು ಯಾರು ನೀ ಯಾರು ಎಂದರೆ, ನಾನು ಸಾಕ್ಷಾತ್ ಕಲಾದೇವತೆ ಸರಸ್ವತಿಯ ವರಪುತ್ರಿ ಎಂದವರೆ ಎಂ.ಎನ್.ಲಕ್ಷ್ಮೀದೇವಿ ಅಮ್ಮನವರು.. ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಅಸಮಾನ್ಯವಾದದ್ದು.. ಪೋಷಕ ಪಾತ್ರಗಳಿಗೆ ಒಂದು ವಿಭಿನ್ನ ರೀತಿಯ ಮೆರುಗು, ವೈಭವ, ಗೌರವ ತಂದುಕೊಟ್ಟ ಕಲಾವಿದರ ಪೈಕಿ ಇವರ ಕೊಡುಗೆ ಬಹಳ ದೊಡ್ಡದು. ಪೋಷಕ ಕಲಾವಿದರು ಅಥವಾ ಪೋಷಕ ಪಾತ್ರಗಳು ಅಂದಾಗ ನನ್ನ ಮನಸ್ಸಿಗೆ ಬರುವುದು ‘ಪೋಷಕ’ ಎನ್ನುವ ಪದದ ಅರ್ಥ, ಅದರ ಅರ್ಥ ನಿಮಗೆಲ್ಲ ಗೊತ್ತೇ ಇದೆ.. English ನಲ್ಲಿ ಈ ಪದಕ್ಕೆ ‘Guardian’ ಎಂದು ಅರ್ಥ, Guardian ಎನ್ನುವ ಪದವನ್ನು Guardian Angels ಎಂದು ಸಹ ಕರೆಯುತ್ತಾರೆ.

ಇವರುಗಳು ನಮ್ಮ ಚಿತ್ರಗಳಿಗೆ ಅಥವಾ ಮುಖ್ಯ ಭೂಮಿಕೆ ನಿಭಾಯಿಸುವಂತಹ ನಟ ನಟಿಯರಿಗೆ ನಿಜವಾಗಲೂ Guardian Angels ಗಳ ಹಾಗೆಯೇ ಇರುತ್ತಾರೆ. ಯಾಕಂದ್ರೆ ಪೋಷಕ ಕಲಾವಿದರು ತಮ್ಮ ಸರ್ವಸ್ವವನ್ನು ಅರ್ಪಿಸಿ, ಮುಖ್ಯ ಭೂಮಿಕೆ ನಿರ್ವಹಿಸುವ ಪಾತ್ರಗಳಿಗೆ ಅಥವಾ ಇಡೀ ಚಿತ್ರಕ್ಕೆ ಒಂದು ಬೆನ್ನೆಲುಬಾಗಿರುತ್ತಾರೆ ಅಥವಾ ಚಿತ್ರದ ಆಧಾರ ಸ್ತಂಭದಂತೆ ಇರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸತ್ಯವನ್ನು ಮರೆತು, ಪೋಷಕ ಪಾತ್ರದ ಮಹತ್ವವನ್ನು ಸರಿಯಾಗಿ ಅರಿಯದೆ, ಆ ಪಾತ್ರಗಳನ್ನು ಹಿಂದಕ್ಕೆ ತಳ್ಳಿ, ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಮರಿಯಾದೆ, ಸ್ಥಾನ ಮಾನ ಇದೆಲ್ಲವನ್ನು ಅವರಿಗೆ ಸಂಪೂರ್ಣವಾಗಿ ಕೊಡುವುದನ್ನು ಮರೆತಿದ್ದೇವೆ ಎಂದು ಹೇಳಬಹುದು.

ನಮ್ಮ ಚಿತ್ರರಂಗದ ಈ Guardian Angels ಅಥವಾ ನಮ್ಮ ಪೋಷಕರನ್ನ ಎಂದಿಗೂ ಮರೆಯದೆ ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಧರ್ಮ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top