fbpx
ಸಮಾಚಾರ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆ ‘ವಿಶಿಷ್ಠ ಗಿಫ್ಟ್’ ನೀಡಿದ ಪ್ರಧಾನಿ ಮೋದಿ

ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ಇದೇ ವೇಳೆ ಅಪರೂಪದ ಗಿಫ್ಟ್ ನೀಡಿ ಹ್ಯಾರಿಸ್ ಅವರನ್ನು ಬೆರಗುಗೊಳಿಸಿದ್ದಾರೆ.

ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಐದು ದಶಕಗಳ ಹಳೆಯ ಸರ್ಕಾರಿ ಅಧಿಸೂಚನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ಕಮಲಾ ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರ ಹೆಸರಿದೆ. ಸರ್ಕಾರಿ ಅಧಿಕಾರಿಯಾಗಿ ಗೋಪಾಲನ್ ಅವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 1966ರ ಸರ್ಕಾರದ ನೋಟಿಫಿಕೇಷನ್ ಗೆ ಕಟ್ಟಿಗೆಯ ಫ್ರೇಮ್ ಹಾಕಿಸಿ ಕಮಲಾ ಹ್ಯಾರಿಸ್ ಅವರಿಗೆ ನೀಡಿದ್ದಾರೆ.

 

 

ಕಮಲಾ ಹ್ಯಾರಿಸ್​ ಭಾರತದ ಮೂಲದವರು. ಅಂದರೆ ಅವರ ತಾಯಿಯ ತವರು ಮನೆ ತಮಿಳುನಾಡಿನ ತುಳಸೇಂದ್ರಪುರಂ. ಇವರ ತಾತ ಪಿ.ವಿ.ಗೋಪಾಲನ್​ ಸರ್ಕಾರಿ ಉದ್ಯೋಗಿಯಾಗಿದ್ದು, ತುಂಬ ಹೆಸರು ಮಾಡಿದ್ದರು. ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಪಿ.ವಿ.ಗೋಪಾಲನ್​ರನ್ನು ಸ್ಮರಿಸುವಂಥ ಉಡುಗೊರೆಯನ್ನು ಕಮಲಾ ಹ್ಯಾರಿಸ್​ಗೆ ನೀಡಿದ್ದಾರೆ. ತಾತ ಗೋಪಾಲನ್​​ರಿಗೆ ಸಂಬಂಧಪಟ್ಟ ಹಳೇ ಅಧಿಸೂಚನೆಗಳ ಪ್ರತಿಯನ್ನು ಒಂದು ಚೆಂದನೆಯ ಮರದ ಕರಕುಶಲ ಫ್ರೇಮ್​​ನಲ್ಲಿ ಹಾಕಿ ಮೊಮ್ಮಗಳು ಕಮಲಾ ಹ್ಯಾರಿಸ್​ಗೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top