fbpx
ಸಮಾಚಾರ

ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಹುದ್ದೆಗಳು: 5719 ಹುದ್ದೆಗಳು ಭರ್ತಿ

ಕರ್ನಾಟಕ ಸರ್ಕಾರ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಈ ಕುರಿತು ಹಂತ-ಹಂತವಾಗಿ ಅಧಿಸೂಚನೆ ಪ್ರಕಟವಾಗಲಿದೆ.

ಜಲಸಂಪನ್ಮೂಲ ಇಲಾಖೆಯ ಹಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಈ ಕೆಳಗಿನ ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅಗತ್ಯ ತಯಾರಿಯನ್ನು ನಡೆಸಲು ಈ ಮಾಹಿತಿ ಅನುಕೂಲವಾಗಿದೆ. ಖಾಲಿ ಹುದ್ದೆಗಳ ಮಾಹಿತಿಯನ್ನು ಕೆಳಗಿನಂತೆ ಚೆಕ್‌ ಮಾಡಿಕೊಳ್ಳಬಹುದು.

ಅಸಿಸ್ಟೆಂಟ್ ಇಂಜಿನಿಯರ್ 1020. ಪ್ರಥಮ ದರ್ಜೆ ಸಹಾಯಕ 399. ದ್ವಿತೀಯ ದರ್ಜೆ ಸಹಾಯಕ 467. ಜೂನಿಯರ್ ಇಂಜಿನಿಯರ್ 697. ರೆವಿನ್ಯು ಇನ್ಸ್‌ಪೆಕ್ಟರ್ 21 ಹುದ್ದೆಗಳಿವೆ. ಪ್ರಥಮ ದರ್ಜೆ ರೆವಿನ್ಯು ಸರ್ವೇಯರ್ 169. ಪ್ರಥಮ ದರ್ಜೆ ಲೆಕ್ಕ ಸಹಾಯಕ 80, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 142 ಸೇರಿದಂತೆ ಒಟ್ಟು 5719 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಈ ಮೇಲಿನ ಖಾಲಿ ಇರುವ ಹುದ್ದೆಗಳನ್ನು ಹಾಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ / ನೌಕರರನ್ನು ಅನ್ಯ ಕರ್ತವ್ಯದ ಮೇಲೆ ಹಾಗೂ ಹೆಚ್ಚುವರಿ ಪ್ರಭಾರದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದ್ದು, ಸಾಧ್ಯವಾದಷ್ಟು ಕಾಲಮಿತಿಯಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನೇರ ನೇಮಕಾತಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಹಾಗೂ ಮುಂಬಡ್ತಿಯಿಂದ ತುಂಬಬೇಕಾದ ಹುದ್ದೆಗಳನ್ನು ಮುಂಬಡ್ತಿಯಿಂದ ತುಂಬಲು ಕ್ರಮ ಜರುಗಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top