fbpx
ಸಮಾಚಾರ

ನಟ ನೀನಾಸಂ ಸತೀಶ್ ಅವರ ತಾಯಿ ನಿಧನ

ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ವಯಸ್ಸಿನ ಅವರು ಆರ್​.ಆರ್​.ನಗರದಲ್ಲಿರುವ ನಿವಾಸದಲ್ಲಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರಿಗೆ ಆರೋಗ್ಯ ಸಮಸ್ಯೆಯಿತ್ತು. ಸತೀಶ್ ಮತ್ತು ಅವರ ಹೆಂಡತಿ ಇಬ್ಬರು ಚಿಕ್ಕತಾಯಮ್ಮ ಅವರ ಆರೈಕೆ ಮಾಡುತ್ತಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಸತೀಶ್​ ಬಿಜಿಯಾಗಿರುತ್ತಿದ್ದರೂ ಸಮಯ ಸಿಕ್ಕಾಗಲೆಲ್ಲ ಮನೆಯಲ್ಲೇ ಹೆಚ್ಚ ಸಮಯ ಕಳೆಯುತ್ತಾ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.

ಚಿಕ್ಕತಾಯಮ್ಮ ಅವರು ಮಗ ಸತೀಶ್​ ಅವರ ಜೊತೆಯಲ್ಲಿ ಬೆಂಗಳೂರಿನಲ್ಲೇ ಇದ್ದರು. ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ. ಇಂದೇ ಪಾರ್ಥೀವ ಶರೀರವನ್ನು ಯಲದಳ್ಳಿಗೆ ತೆಗೆದುಕೊಂಡು ಹೋಗಲಿದ್ದಾರೆಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top