fbpx
ಸಮಾಚಾರ

ಭರ್ಜರಿ ಉದ್ಯೋಗಾವಕಾಶ: SBIನಲ್ಲಿ 2056 ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್‌ ಬ್ಯಾಂಕ್‌ 2056 ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಅಗತ್ಯ ಶೈಕ್ಷಣಿಕ ಅರ್ಹತೆ
– ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪದವಿಗೆ ಸಮಾನವಾದ ಶಿಕ್ಷಣ ಪಡೆದಿರಬೇಕು.

ವೇತನ ಶ್ರೇಣಿ:
ಇತರೆ ಭತ್ಯೆಗಳು ಸೇರಿದಂತೆ ಮಾಸಿಕ ₹ 23,700 ಮೂಲ ವೇತನ ಪಡೆಯಬಹುದು.

ವಯಸ್ಸು:
ಕನಿಷ್ಠ 18 ವರ್ಷಗಳು, ಗರಿಷ್ಠ 30 ವರ್ಷಗಳ ವಯೋಮಿತಿಯಲ್ಲಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಆದಾಗ್ಯೂ ಸರ್ಕಾರಿ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ:
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ ₹ 750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅಪ್ಲೈ ಮಾಡುವುದು ಹೇಗೆ?
– ಅಕ್ಟೋಬರ್​ 5ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಆನ್​ಲೈನ್​ನಲ್ಲಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯ. ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
– ಬ್ಯಾಂಕ್​ನ “Career” ವೆಬ್​ಸೈಟ್​ನ ಮೂಲಕವಾಗಿ – https://bank.sbi/careers ಅಥವಾ https://www.sbi.co.in/careers – ನೋಂದಣಿ ಮಾಡಿಕೊಳ್ಳಬೇಕು.
– ನೋಂದಣಿಯ ನಂತರ ಅಗತ್ಯ ಪ್ರಮಾಣದ ಅರ್ಜಿ ಶುಲ್ಕವನ್ನು ಆನ್​ಲೈನ್ ಮೂಲಕವಾಗಿ ಡೆಬಿಟ್​ ಕಾರ್ಡ್/ಕ್ರೆಡಿಟ್ ಕಾರ್ಡ್​/ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕವಾಗಿ ಪಾವತಿಸಬಹುದು.

ನೇಮಕಾತಿ ವಿಧಾನ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ (ನೇರ ಮತ್ತು ಸಮತಳ) ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ವಿಷಯವಾರು ಖಾಲಿ ಹುದ್ದೆಗಳ ವಿವರವನ್ನು ಅತೀ ಶೀಘ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿರುವ ನೋಟಿಫಿಕೇಶನ್‌ನಲ್ಲಿ ನೀಡಲಿದ್ದು, ಓದಿ ತಿಳಿಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top