fbpx
ಸಮಾಚಾರ

ವಿಚ್ಛೇದನದ ನಂತರ ಹೆಸರು ಬದಲಾಯಿಸಿಕೊಂಡ ನಟಿ ಸಮಂತಾ

ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ನಡುವಣ ದಾಂಪತ್ಯ ಜೀವನ ಅಂತ್ಯಗೊಂಡಿದೆ. ತೆಲುಗಿನ ಖ್ಯಾತ ನಟ ನಾಗಾರ್ಜುನ ಪುತ್ರ ಚೈತನ್ಯ, 2017ರಲ್ಲಿ ನಟಿ ಸಮಂತಾ ಅವರನ್ನು ಮದುವೆ ಮಾಡಿಕೊಂಡಿದ್ದರು. ಆದರೆ ಸುಮಾರು ನಾಲ್ಕು ವರ್ಷಗಳ ನಂತರ ಅಂದ್ರೆ ಇದೆ ಅ. 2ರ ಶನಿವಾರ ಇಬ್ಬರೂ ತಮ್ಮ ವಿಚ್ಛೇದನ ಕುರಿತು ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದರು. ಅದಾದ ಬಳಿಕ ಸಮಂತಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಹೆಸರು ಬದಲಾಯಿಸಿಕೊಂಡಿದ್ದಾರೆ.

 

 

ವಿಚ್ಛೇದನದ ವಿಚಾರ ಅಧಿಕೃತಗೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ತಮ್ಮ ಹೆಸರನ್ನ ಸಮಂತಾ ಬದಲಾಯಿಸಿಕೊಂಡಿದ್ದಾರೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ‘S’ ಅಂತಿದ್ದ ತಮ್ಮ ಹೆಸರನ್ನ ಇದೀಗ ‘ಸಮಂತಾ’ ಅಂತಲೇ ಹಾಕಿಕೊಂಡಿದ್ದಾರೆ. ವಿಚ್ಛೇದನ ಅಧಿಕೃತವಾಗುತ್ತಲೇ, ಸಮಂತಾ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಹೆಸರನ್ನು ಸಮಂತಾ ರುತ್ ಪ್ರಭು ಎಂದು ಬದಲಾಯಿಸಿಕೊಂಡಿದ್ದಾರೆ.

 

 

ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ‘ಸಮಂತಾ ಅಕ್ಕಿನೇನಿ’ ಅಂತಿದ್ದ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡಿದ್ದರು. ‘ಸಮಂತಾ ಅಕ್ಕಿನೇನಿ’ ಅಂತ ಇದ್ದ ಹೆಸರನ್ನು ತೆಗೆದು ಬರೀ ‘ಎಸ್’ ಅಂತ ಹಾಕಿಕೊಂಡಿದ್ದರು. ಏಕಾಏಕಿ ‘ಅಕ್ಕಿನೇನಿ’ ಹೆಸರನ್ನು ಕೈಬಿಟ್ಟ ಕಾರಣಕ್ಕೆ ‘’ಸಮಂತಾ ಮತ್ತು ನಾಗ ಚೈತನ್ಯ ಮಧ್ಯೆ ಬಿರುಕು ಮೂಡಿದೆ’’ ಎಂಬ ಗಾಸಿಪ್ ಟಾಲಿವುಡ್‌ನಲ್ಲಿ ಶುರುವಾಯಿತು. ಈಗ ಇದೇ ಗಾಸಿಪ್ ನಿಜವಾಗಿದೆ. ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಅಂತ್ಯಗೊಂಡಿದ್ದು, ಅದನ್ನ ಅಧಿಕೃತಗೊಳಿಸಿದ ಬಳಿಕ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ‘ಎಸ್’ ತೆಗೆದು ಮತ್ತೆ ‘ಸಮಂತಾ’ ಅಂತಲೇ ಹಾಕಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top