fbpx
ಸಮಾಚಾರ

“ಮೋಸ ಮಾಡುವವರು ಯಾವತ್ತೂ ಉದ್ಧಾರ ಆಗಲ್ಲ” ಸಮಂತಾ-ನಾಗಚೈತನ್ಯ ಡೈವೋರ್ಸ್ ಬಳಿಕ ಮಾಜಿ ಲವರ್ ಸಿದ್ಧಾರ್ಥ್ ಟ್ವೀಟ್ ವೈರಲ್

ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ನಡುವಣ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅ. 2ರ ಶನಿವಾರ ಇಬ್ಬರೂ ತಮ್ಮ ವಿಚ್ಛೇದನ ಕುರಿತು ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದರು. ಈ ನಡುವೆ ಪತಿ ನಾಗಚೈತನ್ಯ ಅವರಿಗೆ ಡಿವೋರ್ಸ್ ನೀಡಿದ ನಟಿ ಸಮಂತಾ ಅವರನ್ನು ನಟ ಸಿದ್ದಾರ್ಥ್ ಕುಟುಕಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಸುದ್ದಿ ಹೊರ ಬರುತ್ತಿದ್ದಂತೆ ಸಮಂತಾ ಮಾಜಿ ಲವರ್ ನಟ ಸಿದ್ದಾರ್ಥ್ ಮಾಡಿದ ಟ್ವೀಟ್ ಒಂದು ಭಾರಿ ವೈರಲ್ ಆಗಿದೆ.

 

 

ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್​ ಬರೆದುಕೊಂಡಿದ್ದಾರೆ. ಸಿದ್ಧಾರ್ಥ್​ ತಮ್ಮ ಟ್ವೀಟ್ ನಲ್ಲಿ​ ಎಲ್ಲಿಯೂ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಈ ಟ್ವೀಟ್ ಸಮಂತಾರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಅಂದಹಾಗೆ ಸಮಂತಾ ಮತ್ತು ಸಿದ್ದಾರ್ಥ್ ಮಾಜಿ ಪ್ರೇಮಿಗಳು ಎನ್ನುವುದು ಬಹುತೇಕ ಜನರಿಗೆ ಗೊತ್ತಿರದ ವಿಚಾರವಾಗಿದೆ. ತೆಲುಗಿನ ಜಬರ್ದಸ್ತ್ ಸಿನಿಮಾ ಸೆಟ್ಟಿನಲ್ಲಿ ಸಮಂತಾ ಹಾಗೂ ಸಿದ್ದಾರ್ಥ್ ಪರಿಚಯವಾಗಿದ್ದರು. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಅಷ್ಟರಲ್ಲಾಗಲೇ ಈ ಜೋಡಿ ಬೇರೆ ಬೇರೆಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top