ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ಪಂದ್ಯದ ಬಳಿಕ ಚಹರ್ ಎಲ್ಲರೆದುರೇ ಪ್ರಪೋಸ್ ಮಾಡಿದ್ದಾರೆ. ದೀಪಕ್ ಪ್ರಪೋಸ್ ಮಾಡಲು ಮುಂದಾಗುತ್ತಿದ್ದಂತೆ ಜಯಾ ಒಮ್ಮೆ ಶಾಕ್ ಆಗಿದ್ದಾರೆ.
ಐಪಿಎಲ್ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳುವ ದೀಪಕ್ ಚಹರ್ ತನ್ನ ಗರ್ಲ್ ಫ್ರೆಂಡ್ ಕೈಗೆ ರಿಂಗ್ ಹಾಕಿದ್ದಾರೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಚಹರ್, ಈ ದಂಪತಿನ್ನು ಆಶೀರ್ವದಿಸಬೇಕಾಗಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
Special and one of the best moment of my life #love pic.twitter.com/jsCEhiAUZY
— Deepak chahar 🇮🇳 (@deepak_chahar9) October 7, 2021
ದೀಪಕ್ ಚಾಹರ್ ಪ್ರೊಪೋಸ್ ಮಾಡಿದ ಆ ಹುಡುಗಿ ಹೆಸರು ಜಯಾ ಭಾರದ್ವಜ್. ಪಂದ್ಯ ಮುಗಿದ ಬಳಿಕ ಪ್ರೆಸೆಂಟೇಶನ್ ಕಾರ್ಯಕ್ರಮಕ್ಕೆ ಎಲ್ಲರೂ ಅಣಿಯಾಗುತ್ತಿರುವಾಗಲೇ ದೀಪಕ್ ಚಾಹರ್ ತನ್ನ ಗರ್ಲ್ ಫ್ರೆಂಡ್ ಬಳಿ ಹೋಗಿ ಒಂದು ಮಂಡಿಯೂರಿ ಪ್ರೊಪೋಸ್ ಮಾಡಿದ್ದಾರೆ. ಅದಕ್ಕೆ ಜಯಾ ಭಾರದ್ವಜ್ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಆಕೆ ದೀಪಕ್ ಪ್ರೊಪೋಸ್ಗೆ ತತ್ಕ್ಷಣವೇ ಓಕೆ ಅಂದಿದ್ದಾರೆ. ಬಳಿಕ ಇಬ್ಬರೂ ಕೆಲವಾರು ಬಾರಿ ತಬ್ಬಿಕೊಂಡು ಆನಂದತುಂದಿಲರಾಗಿದ್ದಾರೆ.
ಜಯಾ ಅವರು ನಟ ಮತ್ತು ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನ ಜನಪ್ರಿಯ ಸ್ಪರ್ಧಾಳುವಾಗಿದ್ದ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೀಪಕ್ ಚಾಹರ್ ಗೆಳತಿ ಜಯಾ ಅವರನ್ನು ಈಗಾಗಲೇ ಟೀಮ್ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
