ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಭಾರತೀಯ ಆಟಗಾರರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಆದರೆ, ಹೊಸ ಜೆರ್ಸಿಯ ಫೋಟೋವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ನೂತನ ಜೆರ್ಸಿಯನ್ನು ಇದೇ ಅಕ್ಟೋಬರ್ 13 ರಂದು ರಿವೀಲ್ ಮಾಡುವುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಪಡೆ ಯಾವರೀತಿಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಒಟ್ಟು 16 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಸೆಣಸಾಡಲಿವೆ. ಅಕ್ಟೋಬರ್ 13ರಂದು ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಭಾರತದ ಕಿಟ್ ಸ್ಪಾನ್ಸರ್ ಎಂಪಿಎಲ್ ಮತ್ತು ಬಿಸಿಸಿಐ ನೂತನ ಜೆರ್ಸಿ ಬಿಡುಗಡೆ ಮಾಡಲಿವೆ.
ಭಾರತ ತಂಡದ ಸಮಸವಸ್ತ್ರ ಒದಗಿಸುವ ಹಕ್ಕನ್ನು ಬೆಂಗಳೂರು ಮೂಲದ ಎಂಪಿಎಲ್ ಸ್ಪೋರ್ಟ್ಸ್ ಪಡೆದುಕೊಂಡಿದ್ದು, ಬಿಸಿಸಿಐ ಜೊತೆಗೆ 2023ರ ಡಿಸೆಂಬರ್ ವರೆಗೂ ಒಪ್ಪಂದ ಹೊಂದಿದೆ. ಸದ್ಯ ಭಾರತ ತಂಡ ರೆಟ್ರೊ ಸ್ಟೈಲ್‌ನ ಕಡು ನೀಲಿ ಬಣ್ಣದ ಸಮಸವಸ್ತ್ರ ತೊಟ್ಟು ಆಡುತ್ತಿದೆ. ಇದನ್ನು 1992ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ತೊಟ್ಟಿದ್ದ ಸಮಸ್ತ್ರದಿಂದ ಪ್ರೇರಣೆ ಪಡೆದು ವಿನ್ಯಾಸ ಮಾಡಲಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
