fbpx
ಸಮಾಚಾರ

“ಬಾಸ್ ಯಾವತ್ತಿದ್ದರೂ ಬಾಸೇ” ವಿಷ್ಣುದಾದಾ ಕಟೌಟ್ ಬಗ್ಗೆ ಸುದೀಪ್ ಹೇಳಿದ್ದು ಹೀಗೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 14ರಂದು ವಿಶ್ವದಾದ್ಯಂತ ಕಿಚ್ಚನ ಚಿತ್ರ ತೆರೆಗೆ ಬರುತ್ತಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪೋಸ್ಟರ್ಸ್, ಕಟ್ ಔಟ್ ಪ್ರೊಮೋಷನ್ ಚಟುವಟಿಕೆಗಳು ಬಿರುಸುಗೊಂಡಿವೆ. ವಿಶೇಷ ಏನೆಂದರೆ ಸಿನಿಮಾ ನಾಯಕ ನಟ ಸುದೀಪ್ ಜೊತೆಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕಟ್ ಔಟ್ ಗಳನ್ನ ಕೂಡ ಕೆಲವು ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತಿದೆ. ಕಿಚ್ಚನ ಕಟ್ಔಟ್ ಗಿಂತಲೂ ಎತ್ತರದಲ್ಲಿ ವಿಷ್ಣುದಾದರ ಕಟ್ಔಟ್ ನಿಲ್ಲಿಸಲಾಗಿದೆ.

ಈ ವಿಚಾರದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮಾತಾಡಿದ್ದಾರೆ. ಕೋಟಿಗೊಬ್ಬ ೩ ಪತ್ರಿಕಾಗೋಷ್ಠಿಯಲ್ಲಿ ವಿಷ್ಣು ಕಟೌಟ್ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ “ಬಾಸ್ ಯಾವತ್ತಿದ್ದರೂ ಬಾಸೇ” ಎಂದು ಗರ್ವದಿಂದ ಹೇಳಿಕೊಂಡಿದ್ದಾರೆ. “ಕೋಟಿಗೊಬ್ಬ ಸರಣಿಯ ಮೊದಲ ಚಿತ್ರ ಮಾಡಿದ್ದು ವಿಷ್ಣು ಅವರೇ, ಅವರು ಆಲದ ಮರ. ಅವರ ನೆರಳಲ್ಲಿ ನಾನು ಇರುತ್ತೇನೆ. ವಿಷ್ಣು ಸರ್ ಕಟೌಟ್ ಹಾಕಿದರೆ ಏನೂ ತಪ್ಪಿಲ್ಲ. ಬಾಸ್ ಯಾವತ್ತಿದ್ದರೂ ಬಾಸೇ” ಎಂದು ಸುದೀಪ್ ಹೇಳಿದರು.

ಅಂದಹಾಗೆ ಕಿಚ್ಚ ಸುದೀಪ್ ಅವ್ರು ವಿಷ್ಣುದಾದಾನ ಅಪ್ಪಟ ಅಭಿಮಾನಿ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ., ‘ವಿಷ್ಣುವರ್ಧನ’ ಎಂದು ಸಾಹಸಸಿಂಹನ ಹೆಸರಿನಲ್ಲಿ ಸಿನಿಮಾ ಮಾಡಿ ಅಭಿಮಾನ ಮೆರೆದಿದ್ದವರು ಸುದೀಪ್. ಕಿಚ್ಚನ ಪ್ರತಿ ಚಿತ್ರದಲ್ಲೂ ವಿಷ್ಣುದಾದಾರ ವಿಡಿಯೋ ತುಣುಕುಗಳು ಸ್ಕ್ರೀನ್ ಮೇಲೆ ಕಾಣಿಸೋದು ವಾಡಿಕೆ, ಅಭಿಮಾನಿಗಳು ಕೂಡ ಅದನ್ನೇ ಆಸೆ ಪಡುತ್ತಾರೆ.. ಅಷ್ಟೇ ಅಲ್ಲದೆ ‘ಕೋಟಿಗೊಬ್ಬ’ ಮೊದಲ ಸಿನಿಮಾಗೆ ವಿಷ್ಣುವರ್ಧನ್ ನಾಯಕರಾಗಿದ್ದರು. ಹಾಗಾಗಿಯೇ ಕೋಟಿಗೊಬ್ಬ 3 ಸಿನಿಮಾಗೆ ವಿಷ್ಣುದಾದ ಕಟ್ ಔಟ್ ಅನ್ನು ಕೂಡ ಹಾಕಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top