fbpx
ಸಮಾಚಾರ

“ಬೀದಿ ನಾಯಿಗಳ ಬಗ್ಗೆ ಟ್ವೀಟ್​ ಮಾಡಿದಾಗ ಅದು ತನಗೇ ಹೇಳಿದ್ದು ಎಂದು ಭಾವಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ” ಸಿದ್ದಾರ್ಥ್

ಟಾಲಿವುಡ್ ನಟ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಬಳಿಕ ಕಾಲಿವುಡ್ ನಟ ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಸದ್ಯ ಈ ಟ್ವೀಟ್ ಮಾಡಿದ್ದು ಯಾರಿಗೆ ಎಂಬುವುದರ ಬಗ್ಗೆ ಸಿದ್ದಾರ್ಥ್ ಸ್ಪಷ್ಟನೆ ನೀಡಿದ್ದಾರೆ. ಮೋಸ ಮಾಡುವವರು ಎಂದಿಗೂ ಏಳಿಗೆಯಾಗುವುದಿಲ್ಲ, ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಸಮಂತಾ ಅವರನ್ನು ಉದ್ದೇಶಿಸಿಯೇ ಮಾಡಲಾಗಿತ್ತು ಎಂದು ಹೇಳಲಾಗುತ್ತಿತ್ತು. ಯಾಕೆಂದರೆ ಈ ಹಿಂದೆ ಸಮಂತಾ ಹಾಗೂ ಸಿದ್ದಾರ್ಥ್ ಪ್ರೀತಿಸುತ್ತಿದ್ದರು. ಈ ಜೋಡಿ ಮದುವೆಯಾಗುವುದಕ್ಕೂ ನಿರ್ಧಾರ ಮಾಡಿದ್ದರು. ಆದರೆ ಕೆಲವು ಕಾರಣಾಂತರಗಳಿಂದ ಇಬ್ಬರು ಬೇರೆ ಬೇರೆಯಾಗಿದ್ದರು. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಾದ ಬಳಿಕ ಸಮಂತಾ ನಾಗಚೈತನ್ಯ ಅವರನ್ನ ಪ್ರೀತಿಸಿ, ಮದುವೆಯಾದರು. ಈಗ ನಾಲ್ಕು ವರ್ಷಗಳ ದಾಂಪತ್ಯವನ್ನು ಮುರಿದು ಬೇರೆಯಾಗಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ನಟ ಸಿದ್ದಾರ್ಥ್ ಹೀಗೆ ಟ್ವೀಟ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಈ ರೀತಿಯಲ್ಲಿ ಹೀನಾಯಾವಾಗಿ ಮಾತನಾಡೋಕೆ ಹೇಗೆ ಮನಸ್ಸು ಬರುತ್ತದೆ ಎಂದು ಕೆಲವರು ಪ್ರಶ್ನಿಸಿದ್ದರು. ಇದಕ್ಕೆ ಸಿದ್ದಾರ್ಥ್​ ಕಟುವಾಗಿಯೇ ಉತ್ತರ ನೀಡಿದ್ದಾರೆ.

ನನ್ನ ಈ ಹಿಂದಿನ ಟ್ವೀಟ್ ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿರಲಿಲ್ಲ. “ನಿತ್ಯವೂ ನನ್ನ ಮನಸ್ಸಿಗೆ ಏನು ಬರೆಯಬೇಕೆಂದು ತೋಚುತ್ತೋ, ಅದನ್ನು ನಾನು ಟ್ವೀಟ್ ಮಾಡುತ್ತೇನೆ. ಬೀದಿನಾಯಿಗಳ ಬಗ್ಗೆ ಟ್ವೀಟ್ ಮಾಡಿದಾಗ, ಅದು ತನಗೆ ಹೇಳಿದ್ದು ಎಂದು ಕೆಲವರು ಭಾವಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ” ಎಂದು ನಟ ಸಿದ್ಧಾರ್ಥ್ ಹೇಳಿದ್ದಾರೆ. ತನ್ನ ವಿರುದ್ಧ ಸುಖಾಸುಮ್ಮನೆ ಮಾತನಾಡುತ್ತಿದ್ದವರು ಬಾಯಿ ಮುಚ್ಚಿಸಿದ್ದಾರೆ ನಟ ಸಿದ್ಧಾರ್ಥ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top