fbpx
ಸಮಾಚಾರ

ಟಿ20 ವಿಶ್ವಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಟೀಂ ಇಂಡಿಯಾ

ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆಯಾಗಿದೆ. ಕಡು ನೀಲಿ ಬಣ್ಣದ ಜೆರ್ಸಿಯ ಮೇಲೆ ತಿಳಿ ನೀಲಿ ಬಣ್ಣದ ವಿನ್ಯಾಸವಿದೆ. ನೂತನ ಜೆರ್ಸಿ ಆಕರ್ಷಕವಾಗಿದೆ. ಭಾರತದ ಕಿಟ್ ಸ್ಪಾನ್ಸರ್ ಮೊಬೈಲ್ ಪ್ರೀಮಿಯರ್ ಲೀಗ್‌ ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಈ ನೂತನ ಜೆರ್ಸಿಯ ಚಿತ್ರ ಬಹಿರಂಗಪಡಿಸಿವೆ.

ಹೊಸ ಜೆರ್ಸಿಯು ಹಳೆಯ ಜರ್ಸಿಗಿಂತ ಸ್ವಲ್ಪ ಭಿನ್ನವಾಗಿದೆ. ಇದುವರೆಗೂ ಟೀಮ್ ಇಂಡಿಯಾ ಧರಿಸಿದ್ದ ಜೆರ್ಸಿ ಕಡು ನೀಲಿ ಬಣ್ಣದ್ದಾಗಿತ್ತು. ಈ ಜರ್ಸಿ ಕೂಡ ಒಂದೇ ಬಣ್ಣದ್ದಾಗಿದೆ ಆದರೆ ಅದರ ದಿಯಾನ್ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಹಿಂದಿನ ಜರ್ಸಿಯಲ್ಲಿ, ಭುಜದ ಮೇಲೆ ತ್ರಿವರ್ಣ ಇತ್ತು, ಆದರೆ ಈ ಜರ್ಸಿಗೆ ಭುಜದ ಮೇಲೆ ಯಾವುದೇ ವಿನ್ಯಾಸವಿಲ್ಲ.

ಅಕ್ಟೋಬರ್‌ 17ರಿಂದ ನವೆಂಬರ್‌ 14ರವರೆಗೆ ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಭಾರತ ತಂಡ ಅಕ್ಟೋಬರ್‌ 24ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಅ.18 ಮತ್ತು ಅ.20 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಭ್ಯಾಸ ಪಂದ್ಯಗಳಲ್ಲೇ ಭಾರತ ತಂಡ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top