fbpx
ಸಮಾಚಾರ

ಅಕ್ಟೋಬರ್ 13: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಅಕ್ಟೋಬರ್ 13, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಅಷ್ಟಮೀ 8:07 pm
ನಕ್ಷತ್ರ : ಪೂರ್ವಾಷಾಢ 10:19 am
ಯೋಗ : ಸುಕರ್ಮ 3:48 am
ಕರಣ : ವಿಷ್ಟಿ 8:54 am ಬಾವ 8:07 pm

Time to be Avoided
ರಾಹುಕಾಲ : 12:05 pm – 1:33 pm
ಯಮಗಂಡ : 7:41 am – 9:09 am
ದುರ್ಮುಹುರ್ತ : 11:42 am – 12:29 pm
ವಿಷ : 6:04 pm – 7:37 pm
ಗುಳಿಕ : 10:37 am – 12:05 pm

Good Time to be Used
ಅಮೃತಕಾಲ : 3:23 am – 4:56 am

Other Data
ಸೂರ್ಯೋದಯ : 6:09 am
ಸುರ್ಯಾಸ್ತಮಯ : 6:01 pm
ರವಿರಾಶಿ : ಕನ್ಯ
ಚಂದ್ರರಾಶಿ : ಧನುಸ್ upto 16:06

 

 

 

ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿರಿ. ದೈಹಿಕ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚು ಬರುವ ಸಂಭವ. ದೈವಕೃಪೆಯಿಂದ ಸಣ್ಣದರಲ್ಲಿಯೇ ಪರಿಹಾರ ದೊರೆಯುವುದು. ಆಂಜನೇಯ ಸ್ತೋತ್ರ ಪಠಿಸಿರಿ.

ಒಂದು ಹೆಜ್ಜೆ ಮುಂದಿಟ್ಟು ಪ್ರಗತಿ ಆಗುತ್ತದೆ ಎನ್ನುವಷ್ಟರಲ್ಲಿಯೇ ಎರಡು ಹೆಜ್ಜೆ ಹಿಂದಕ್ಕೆ ಜಾರುವಿರಿ. ಹಾಗಂತ ಪ್ರಯತ್ನವನ್ನೇ ಮಾಡದಿರುವುದು ಒಳ್ಳೆಯದಲ್ಲ. ನಿಮ್ಮ ಕಾರ್ಯ ಯೋಜನೆಗೆ ಕೊನೆಗೆ ಜಯ ಸಿಗುವುದು.

ಇಚ್ಛೆ ಇದ್ದಲ್ಲಿ ಕಷ್ಟ ಇರಲಾರದು. ಅಂತೆಯೇ ಮಾಡುವ ಕಾರ್ಯಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸ ಮಾಡಿದರೆ ಆಯಾಸ ಕಾಣಿಸಿಕೊಳ್ಳುವುದಿಲ್ಲ. ಕೌಟುಂಬಿಕವಾಗಿ ಸಂತೋಷದ ದಿನ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಕೊಂಚ ಗಮನ ಇರಲಿ. ನಿಮ್ಮ ಮುಂದೆ ನಿಮ್ಮ ಪರವಾಗಿಯೇ ಮಾತನಾಡುವ ಅವರು ಹೊರಗಡೆ ನಿಮ್ಮ ವಿರುದ್ಧ ಕಾರ್ಯತಂತ್ರವನ್ನು ರೂಪಿಸುವರು. ಕುಲದೇವತಾ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು.

 

ಹಿಡಿದ ಕೆಲಸವನ್ನು ಆದಷ್ಟು ಬೇಗ ಮುಗಿಸಿಬಿಡುವ ಆತುರ ನಿಮಗೆ. ದೈವಕೃಪೆ ಇದ್ದು, ಹಣವು ಶೀಘ್ರವೇ ಕೈಸೇರಲಿ ಎಂಬ ಬಯಕೆ. ಆದರೆ ಆತುರ ಆತುರವಾಗಿ ಮಾಡಿದ ಕೆಲಸಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇರುತ್ತದೆ.

 

ಮನೆಯಲ್ಲಿ ಸಂತಸ ತುಂಬಿದ ವಾತಾವರಣ. ಕುಟುಂಬದ ಸದಸ್ಯರ ನಡುವೆ ಪ್ರೀತಿ-ಪ್ರೇಮ ವಿಶ್ವಾಸಗಳು ಅಭಿವೃದ್ಧಿಯನ್ನುಂಟು ಮಾಡುವುದು. ನೆರೆಮನೆಯವರೊಂದಿಗೆ ಇದ್ದ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಕೆಳಗೆ ನೂಕುವ ಸಂದರ್ಭವಿರುತ್ತದೆ. ಹಾಗಾಗಿ ಹಮ್ಮಿಕೊಂಡ ಕಾರ್ಯ ಪೂರ್ಣವಾಗುವವರೆಗೂ ಆ ವಿಷಯವನ್ನು ಬಹಿರಂಗ ಮಾಡದಿರಿ. ಸಂಗಾತಿಯ ಮತ್ತು ಮಕ್ಕಳ ಮಾತನ್ನು ಆಲಿಸಿರಿ.

 

ಕೆಲವೊಮ್ಮೆ ನೀವಾಡುವ ಮಾತುಗಳಿಂದಲೇ ನಿಷ್ಟುರವನ್ನು ಹೊಂದುವಿರಿ. ಆದಷ್ಟು ಪರರಿಗೆ ನೋವು ಉಂಟಾಗುವ ಮಾತುಗಳನ್ನು ಆಡದೆ ಇರುವುದು ಕ್ಷೇಮಕರ. ಹಣಕಾಸಿನ ತೊಂದರೆ ಇರುವುದಿಲ್ಲ.

 

ತಕ್ಕಡಿಯಂತೆ ಸಮತೋಲನ ಕಾಯ್ದುಕೊಳ್ಳಲು ಕೊಟ್ಟ ಮಾತಿನಂತೆ ನಡೆಯುವುದು ಕ್ಷೇಮಕರ. ಈ ಹಿಂದೆ ಮಾಡಿದ ವಾಗ್ದಾನಗಳನ್ನು ಪೂರೈಸದೆ ಇದ್ದ ಕಾರಣ ಆತ್ಮೀಯ ಗೆಳೆಯನೇ ಇಂದು ನಿಮಗೆ ಕೈಕೊಡುವನು. ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ.

ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ಹೊಸ ವ್ಯಕ್ತಿಗಳ ಪರಿಚಯದಿಂದ ಗುರಿ ಸಾಧಿಸುವಿರಿ. ಪ್ರಮುಖ ಸಮಾರಂಭಕ್ಕೆ ನಿಮ್ಮನ್ನು ಮುಖ್ಯ ಅತಿಥಿಯಾಗಿಸಲು ಕರೆ ಬರುವ ಸಾಧ್ಯತೆ ಇರುವುದು.

 

 

ಶುಭ ನುಡಿಯೇ ಶಕುನದ ಹಕ್ಕಿ ಎನ್ನುವಂತೆ ಇಂದಿನ ಎಲ್ಲಾ ಕೆಲಸಗಳಲ್ಲೂ ಧನಾತ್ಮಕತೆ ಇರಲಿ. ಇದರಿಂದ ಧನ್ಯತೆಯ ಭಾವವನ್ನು ಹೊಂದುವಿರಿ. ಬಾಕಿ ಬರಬೇಕಾಗಿದ್ದ ಹಣವು ಕೈ ಸೇರುವುದರಿಂದ ಅನುಕೂಲವಾಗುವುದು.

ಋಣಾತ್ಮಕ ವ್ಯಕ್ತಿಗಳ ಮಾತಿಗೆ ಕಿವಿಗೊಡದಿರಿ. ಅವರು ನಿಮ್ಮ ಗುರಿ ತಲುಪಿಸುವ ಪ್ರಯತ್ನವನ್ನು ಮಾಡುವರು. ನೀವು ಹೊರಟಿರುವ ದಾರಿ ಸರಿ ಇದ್ದಲ್ಲಿ ಇನ್ನೊಬ್ಬರ ಹಿತವಚನ ನಿಮಗೆ ಅಗತ್ಯವಿಲ್ಲ. ಧೈರ್ಯದಿಂದ ಮುನ್ನುಗ್ಗಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top