fbpx
ಸಮಾಚಾರ

ಸರ್ಕಾರೀ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಟ್ಟಿಸಿಕೊಟ್ಟ ಸಂಸದ ಜಿಸಿ ಚಂದ್ರಶೇಖರ್

ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಬೆಂಗಳೂರಿನ ಪ್ರತಿಷ್ಠಿತ ಕಲಾ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಹೌದು, ಬೆಂಗಳೂರಿನ ಅಂಬೇಡ್ಕರ್ ಬೀದಿಯಲ್ಲಿರುವ ಸರ್ಕಾರೀ ಕಲಾ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಟ್ಟಿಸಿಕೊಟ್ಟಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಸರ್ಕಾರೀ ಕಲಾ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯಕತೆಯಿದೆ ಎಂದು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿವರ್ಗ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಕೂಡಲೇ ಸ್ಪಂದಿಸಿದ್ದ ಚಂದ್ರಶೇಖರ್ ಅವರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಅನುಧಾನವನ್ನು ಬಿಡುಗಡೆಗೊಳಿಸಿದ್ದರು.

 

 

ಇದೀಗ ಆ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಸಂಪೂರ್ಣಗೊಂಡಿದ್ದು ಉದ್ಘಾಟನೆಯನ್ನು ಕೂಡ ಮಾಡಲಾಗಿದೆ. ಸ್ವತಃ ಜಿಸಿ ಚಂದ್ರಶೇಖರ್ ಅವರೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ. ಅಕ್ಟೊಬರ್ 14ರಂದು ಆಯುಧಪೂಜೆ ಹಬ್ಬದ ಪ್ರಯುಕ್ತ ನೀರಿನ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಈ ವೇಳೆ ಮಾನ್ಯ ನ್ಯಾಯಮೂರ್ತಿಗಳಾದ ಎಚ್.ಎಸ್ ನಾಗಮೋಹನದಾಸ್, ಕಾಲೇಜು ಪ್ರಾಂಶುಪಾಲರಾದ ಡಾ|ರಾಜಶೇಖರನ್ ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿದ್ದರು. ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕರು ಕೂಡ ಉಪಯೋಗಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top