fbpx
ಸಮಾಚಾರ

‘ಆತ ಸಲಿಂಗಕಾಮಿ, ಅಂಥವನೊಂದಿಗೆ ಸಮಂತಾ ಸಂಬಂಧ ಬೆಳೆಸಲ್ಲ’ ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

ಟಾಲಿವುಡ್‍ ನಟ ನಾಗಚೈತನ್ಯ, ಸಮಂತಾ ವೈವಾಹಿಕ ಸಂಬಂಧ ಮುರಿದು ಬಿದ್ದು ಹಲವು ದಿನಗಳಾಗಿವೆ. ಆದರೆ ಈ ಜೋಡಿ ಬೇರೆಯಾಗುತ್ತಿದ್ದಂತೆ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಇನ್ನೊಂದು ವಿಚಾರ ಸೆರ್ಪಡೆಯಾಗಿದೆ. ಈ ಜೋಡಿ ಸಂಬಂಧ ಮುರಿದು ಬೀಳಲು ಸಮಂತಾರ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಕಾರಣ ಎಂಬ ವದಂತಿ ಹರಿದಾಡುತ್ತಿವೆ.

ತಮ್ಮ ಮತ್ತು ಸಮಂತಾ ನಡುವಿನ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರೀತಂ, ಚಾಯ್–ಸಮಂತಾ ಬೇರೆ ಬೇರೆಯಾಗಿದ್ದಕ್ಕೆ ನನಗೆ ಕೆಲವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ನೋವು ತೋಡಿಕೊಂಡಿದ್ದರು.

ಆದರೆ ಅವರ ಬಗ್ಗೆ ಶ್ರೀರೆಡ್ಡಿ ಬೇರೆ ವಾದವನ್ನೇ ಮುಂದಿಟ್ಟಿದ್ದಾರೆ. ‘ಪ್ರೀತಮ್​ ಓರ್ವ ಸಲಿಂಗಕಾಮಿ. ಆತನ ಜೊತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಹಾಗಾಗಿ ಅವರು ಈ ಡಿವೋರ್ಸ್​ಗೆ ಕಾರಣ ಅಲ್ಲ’ ಎಂದು ಶ್ರೀರೆಡ್ಡಿ ಹೇಳಿದ್ದಾರೆ ಎಂದು ಅನೇಕ ಕಡೆಗಳಲ್ಲಿ ವರದಿ ಆಗಿದೆ. ಈ ಮಾತಿಗೆ ಪ್ರೀತಮ್​ ಮತ್ತು ಸಮಂತಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top