fbpx
ಸಮಾಚಾರ

ಮತ್ತೊಂದು ಸರ್ಕಾರೀ ಶಾಲೆಯನ್ನು ಅಭಿವೃದ್ದಿಪಡಿಸಿ ‘ಹೈಟೆಕ್ ಶಾಲೆ’ ಮಾಡಿದ ಸಂಸದ ಜಿಸಿ ಚಂದ್ರಶೇಖರ್

ಈ ಶಾಲಾ ಕಟ್ಟಡದ ಮೇಲೆಲ್ಲಾ ವರ್ಣಮಯ ಚಿತ್ತಾರ. ತರಗತಿಯ ಒಳಹೊಕ್ಕರೆ ಅಲ್ಲೊಂದು ಸ್ಮಾರ್ಟ್ ಪರದೆ ಅಳವಡಿಸಿರುವ ರಂಗಮಂದಿರ. ಇದು ಸ್ಮಾರ್ಟ್ ಸೌಲಭ್ಯಗಳೊಂದಿಗೆ ನವೀಕೃತಗೊಂಡಿರುವ ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಸರ್ಕಾರಿ ಮಾದರಿ ಶಾಲೆಯ ಈಗಿನ ನೋಟ. ಇದಕ್ಕೆ ಕಾರಣರಾದವರು ಸಂಸದರಾದ ಜಿಸಿ ಚಂದ್ರಶೇಖರ್ ಅವರು.

 

 

ಹೌದು, ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ಮತ್ತೊಂದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. #SaveGovernmentSchool #ಸರ್ಕಾರಿ_ಶಾಲೆ_ಉಳಿಸಿ ಹಾಗು #GirlsPride ಅಭಿಯಾನಗಳನ್ನು ಆರಂಭಿಸಿ ಅದರ ಅಡಿಯಲ್ಲಿ ಈಗಾಗಲೇ ಬೆಂಗಳೂರಿನ ದಾಸರಹಳ್ಳಿ, ಬ್ಯಾಡರಹಳ್ಳಿ, ಹೆಬ್ಬಾಳ ಮತ್ತು ಶಿವಾಜಿ ನಗರಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಚಂದ್ರಶೇಖರ್ ಅಭಿವೃದ್ಧಿಪಡಿಸಿದ್ದರು. ಇದೀಗ ಕಾವಲ್ ಭೈರಸಂದ್ರಲ್ಲಿರುವ ಸರ್ಕಾರಿ ಶಾಲೆಗೆ ನೂತನ ತಂತ್ರಜ್ಞಾನಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.

ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮತ್ತು ಹತ್ತು ಮಂದಿ ಸಿಬಂದಿವರ್ಗ ಕಾರ್ಯ ನಿರ್ವಹಿಸುವ ಸರ್ಕಾರೀ ಪ್ರಾರ್ಥಮಿಕ ಶಾಲೆಗೇ ನೂತನ ತಂತ್ರಜಾನಗಳನ್ನ ಕಲ್ಪಿಸಿ ನವೀಕರಿಸಲಾಗಿದೆ. ಜಿಸಿ ಚಂದ್ರಶೇಖರ್ ತಮ್ಮ ಸಂಸದರ ನಿಧಿಯಿಂದ ಭೈರಸಂದ್ರಲ್ಲಿರುವ ಇರುವ ಸರ್ಕಾರಿ ಶಾಲೆಯನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಉತ್ತಮಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡು ಅಭಿವೃದ್ಧಿಪಡಿಸಿದ್ದಾರೆ. ಅವರು ಈ ಶಾಲೆಯ ಎರಡು ಕೊಠಡಿಗಳ ಕಟ್ಟಡ ನಿರ್ಮಿಸಿ, ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

 

 

ಇಲ್ಲಿ ಯಾವುದೇ ಕಾನ್ವೆಂಟ್‍ಗೂ ಕಡಿಮೆ ಇಲ್ಲವೆಂಬಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಾಗೂ ಇಡೀ ಶಾಲಾ ಕಟ್ಟಡಕ್ಕೆ ಪೈಂಟ್ ಮಾಡಿಸಿಕೊಟ್ಟಿದ್ದಾರೆ. ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಮ್ ನಿರ್ಮಿಸಲಾಗಿದೆ. ಇನ್ನು ಮಕ್ಕಳಿಗೆ ಅತ್ಯಾಧುನಿಕ ಡೆಸ್ಕ್, ಛೇರ್, ಸ್ಮಾರ್ಟ್ ಬೋರ್ಡ್ ಒದಗಿಸಲಾಗಿದೆ.

ಹಾಗೆಯೆ ಹೆಣ್ಣುಮಕ್ಕಳ ಶುಚಿತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ #ಹೆಣ್ಣುಮಕ್ಕಳಹೆಮ್ಮೆ #girlspride ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಶೌಚಾಲಯ ದುರಸ್ತಿ ಹಾಗೂ ನವೀಕರಣ, ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್, ನೀರಿನ ಸೌಕರ್ಯ ಕೊಳವೆಗಳ ದುರಸ್ತಿ ಮಾಡಿಸಲಾಗಿದೆ.

 

 

ಶಾಲೆಯನ್ನು ನೂತನ ತಂತ್ರಜ್ಞಾನ ಗಳಿಂದ ಅಭಿವೃದ್ಧಿ ಪಡಿಸಿದ್ದಕ್ಕೆ ಸ್ವತಃ ಶಾಲೆಯ ಮುಖ್ಯ ಶಿಕ್ಷಕಿ ಮಧುರ ಭಾಯಿ ಸಂತಸ ವ್ಯಕ್ತಪಡಿಸಿದ್ದಾರೆ. “ಸನ್ಮಾನ್ಯ ಶ್ರೀ ಚಂದ್ರಶೇಖರ್ ಸಂಸದರು, ತಮ್ಮ ಅನುದಾನದಡಿಯಲ್ಲಿ ನಮ್ಮ ಶಾಲೆಗೆ ಎರಡು ಸ್ಮಾರ್ಟ್ ತರಗತಿಗಳನ್ನು ಮತ್ತು ಶೌಚಾಲಯಗಳನ್ನು, ಶಾಲೆಯ ಆವರಣದ ಸುಣ್ಣ ಬಣ್ಣಗಳನ್ನು ಹಾಗೂ ಸೋಲಾರ್ ದೀಪಗಳನ್ನು ಅಳವಡಿಸಿಕೊಟ್ಟಿದ್ದಾರೆ. ಇದು ನಮ್ಮ ಶಾಲೆಗೆ ಹೆಮ್ಮೆಯಾಗುವಂತ ವಿಷಯ. ಎಲ್ಲ ಮಕ್ಕಳಿಗೂ ದೃಶ್ಯಮಾಧ್ಯಮ ಕಲಿಕೆ ಬಹಳ ಇಷ್ಟ ಆಗುತ್ತದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಇರುವುದಕ್ಕಿಂತ ಹೆಚ್ಚು ದಾಖಲಾತಿ ಮುಂದಿನ ವರ್ಷ ಆಗುವ ಸಂಭವವಿದೆ” ಎಂದು ಮುಖ್ಯ ಶಿಕ್ಷಕಿ ಹರ್ಷ ವ್ಯಕ್ತಪಡಿಸಿದರು.

 

 

ಒಟ್ಟಿನಲ್ಲಿ ಒಟ್ಟಿನಲ್ಲಿ ಸಾಮಾನ್ಯ ಸರ್ಕಾರೀ ಶಾಲೆಯನ್ನು ಜನರು ಬೆರಗಾಗುವ ರೀತಿ ಅಭಿವೃದ್ಧಿ ಮಾಡಿರುವ ಜಿಸಿ ಚಂದ್ರಶೇಖರ್ ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಚಂದ್ರಶೇಖರ್ ಅವರು ಭವಿಷ್ಯದಲ್ಲಿ ಮತ್ತಷ್ಟು ಸರ್ಕಾರೀ ಶಾಲೆಗಳನ್ನು ಅಭಿವೃದ್ಧಿಪಡಿಸಲಿ ಅದರಿಂದ ಬಡ ಮಕ್ಕಳ ಕಲ್ಯಾಣವಾಗಲಿ ಎಂಬುದೇ ನಮ್ಮ ಆಶಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top