fbpx
ಸಮಾಚಾರ

ಪುನೀತ್ ನಿಧನದ ವಿಚಾರ ಆ ಕುಟುಂಬದ ಹಿರಿ ಜೀವಕ್ಕೆ ಗೊತ್ತೇ ಇಲ್ಲ

ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ರಾಜ್ಯವೇ ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಿದ್ದೇವೆ ಎನ್ನುವಷ್ಟರ ಮಟ್ಟಿಗೆ ಶೋಕತಪ್ತವಾಗಿದೆ. ದೇಶದ ಮೂಲೆ ಮೂಲೆಗಳಿಂದ ಗಣ್ಯಾತಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಡಾ.ರಾಜ್ ಕುಟುಂಬದ ಹಿರಿಯ ಜೀವವೊಂದಕ್ಕೆ ಅಪ್ಪು ಅಗಲಿದ ವಿಚಾರವೇ ಗೊತ್ತಿಲ್ಲ.

ಹೌದು, ಪುನೀತ್ ರಾಜ್​ಕುಮಾರ್​ ಅಗಲಿಕೆಯ ವಿಚಾರ ಡಾ.ರಾಜ್​ಕುಮಾರ್​ ಅವರ ಸಹೋದರಿ ನಾಗಮ್ಮ ಅವರಿಗೆ ಇನ್ನೂ ಗೊತ್ತಿಲ್ಲ. ಗಾಜನೂರಿನಲ್ಲಿರುವ ನಾಗಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರೀತಿಯ ಅಣ್ಣನ ಕಿರಿ ಮಗ ಇನ್ನಿಲ್ಲ ಎಂಬ ವಿಷಯ ಗೊತ್ತಾದರೆ ನಾಗಮ್ಮ ಅವರಿಗೆ ಆಘಾತವಾಗಬಹುದೆಂಬ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಷಯ ತಿಳಿಸಿಲ್ಲ.

 

 

ಸೋದರತ್ತೆ ಎಂದರೆ ಅಪ್ಪುವಿಗೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ಡಾ.ರಾಜ್‍ಕುಮಾರ್ ಅವರ ಕಿರಿಯ ಪುತ್ರ ಎಂಬ ಕಾರಣಕ್ಕೆ ಪುನೀತ್ ಅವರನ್ನು ಕಂಡರೆ ನಾಗಮ್ಮ ಅವರಿಗೂ ತುಂಬಾ ವಾತ್ಸಲ್ಯ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ತಮಿಳುನಾಡಿನಲ್ಲಿರುವ ಗಾಜನೂರಿನ ಮನೆಗೆ ಹೋಗುತ್ತಿದ್ದುದೇ ತನ್ನ ಪ್ರೀತಿಯ ಸೋದರತ್ತೆ ನಾಗಮ್ಮ ಅವರನ್ನು ನೋಡಲು.

ಸಧ್ಯಕ್ಕೆ ಡಾ.ರಾಜ್ ಕುಟುಂಬದ ಅತ್ಯಂತ ಹಿರಿಯ ಜೀವ ಎನಿಸಿರುವ ನಾಗಮ್ಮ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದರೆ ಆಘಾತವಾಗುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಅವರಿಗೆ ವಿಷಯ ತಿಳಿಯದಂತೆ ಗೌಪ್ಯತೆ ಕಾಪಾಡಲಾಗಿದೆ. ನಾಗಮ್ಮ ಅವರ ಪುತ್ರ ಗೋಪಾಲ್ ತಮ್ಮ ಹೆಂಡತಿ ಹಾಗೂ ಮಗಳನ್ನು ಕರೆದುಕೊಂಡು ನಿನ್ನೆಯೇ ಬೆಂಗಳೂರಿಗೆ ಹೋಗಿದ್ದಾರೆ. ಗಾಜನೂರಿನ ಮನೆಯಲ್ಲಿ ನೀರವ ಮೌನ ಆವರಿಸಿದೆ. ನಾಗಮ್ಮ ಅವರನ್ನು ಸಹಾಯಕಿಯರು ಉಪಚರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top