fbpx
ಸಮಾಚಾರ

ಹಿರಿಯ ನಟ ಯೂಸುಫ್ ಹುಸೇನ್ ವಿಧಿವಶ

ಹಿರಿಯ ನಟ ಯೂಸುಫ್ ಹುಸೇನ್ ಅವರು ಕೋವಿಡ್-19 ನಿಂದ ಶನಿವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ನಟ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಹುಸೇನ್ ಅವರ ಅಳಿಯ, ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಪಿಟಿಐಗೆ ತಿಳಿಸಿದ್ದಾರೆ.

ಹನ್ಸಲ್ ಮೆಹ್ತಾ ಅವರು ಟ್ವಿಟರ್ ಮೂಲಕ ಹುಸೇನ್ ಅವರ ನಿಧನದ ಕುರಿತು ಮಾಹಿತಿ ನೀಡಿದ್ದಾರೆ.ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಹುಸೇನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

“ಧೂಮ್ 2”, “ರಯೀಸ್” ಹಾಗೂ “ರೋಡ್ ಟು ಸಂಗಮ್” ನಂತಹ ಚಲನಚಿತ್ರಗಳಲ್ಲಿ ನಟನೆ ಮೂಲಕ ಯುಸೂಫ್ ಹುಸೇನ್ ಹೆಸರುವಾಸಿಯಾಗಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top