fbpx
ಸಮಾಚಾರ

ನವೆಂಬರ್ 01: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 1, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಆಶ್ವೇಜ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ 1:21 pm
ನಕ್ಷತ್ರ : ಪುಬ್ಬ 12:52 pm
ಯೋಗ : ಇಂದ್ರ 9:05 pm
ಕರಣ : ಬಾಲವ 1:21 pm ಕುಲವ 12:31 am

Time to be Avoided
ರಾಹುಕಾಲ : 7:43 am – 9:09 am
ಯಮಗಂಡ : 10:36 am – 12:03 pm
ದುರ್ಮುಹುರ್ತ : 12:26 pm – 1:12 pm, 2:44 pm – 3:30 pm
ವಿಷ : 7:44 pm – 9:15 pm
ಗುಳಿಕ : 1:29 pm – 2:56 pm

Good Time to be Used
ಅಮೃತಕಾಲ : 6:35 am – 8:09 am
ಅಭಿಜಿತ್ : 11:39 am – 12:26 pm

Other Data
ಸೂರ್ಯೋದಯ : 6:13 am
ಸುರ್ಯಾಸ್ತಮಯ : 5:52 pm
ರವಿರಾಶಿ : ತುಲ
ಚಂದ್ರರಾಶಿ : ಸಿಂಹ upto 18:39

 

ಮನದ ಸಂಕಲ್ಪ ಸಾಧಿಸಿಕೊಡುವ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮಗಿದೆ. ಸಕಾರಾತ್ಮಕವಾಗಿ ಮುಂದುವರೆಯಿರಿ. ಇದರಿಂದ ನಿಮ್ಮ ಕೀರ್ತಿ ಗೌರವ ಇಮ್ಮಡಿಯಾಗುವುದು. ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ನಿಮ್ಮದೇ ಗುಣಗಾನ ಇರುತ್ತದೆ.

ಬಹುಜನರಿಗೆ ಪ್ರಿಯರಾಗಿದ್ದೀರಿ. ಆದರೆ ತುಸುವಾದರೂ ನಿಷ್ಠುರತೆ ಬೆಳೆಸಿಕೊಳ್ಳದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮತನವನ್ನು ಕಾಯ್ದುಕೊಳ್ಳಲು ಕೆಲವರಿಂದ ಅಂತರ ಕಾಯ್ದುಕೊಳ್ಳಿ.

ನಿಮ್ಮ ಸುತ್ತಮುತ್ತಲೂ ನಿಮ್ಮ ಆರಾಧಿಸುವ, ವಿರೋಧಿಸುವ ಜನರು ಇದ್ದೇ ಇರುತ್ತಾರೆ. ಅವರ ನಿಜವಾದ ಮುಖವಾಡ ತಿಳಿಯದೆ ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ.

ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಕುಲದೇವತಾ ಸ್ಮರಣೆ ಮಾಡಿ.

 

ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆಯನ್ನು ನಿಯಂತ್ರಿಸಿ ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.

 

ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

 

ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

 

ಬದಲಾದ ಕಾಲಧರ್ಮಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ ನೀವು ಅನೇಕ ರೀತಿಯ ಪ್ರಗತಿಯನ್ನು ಸಾಧಿಸಲಿದ್ದೀರಿ. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಿರಿಯರ ಆಶೀರ್ವಾದವೂ ದೊರೆಯುವುದು.

ಎಲ್ಲಾ ರೀತಿ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ನಿಮಗೆ ಶುಭ ದಿನ. ನಿಮಗೆ ಮುದ ನೀಡುವ ಒಂದು ವಾರ್ತೆ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು.

 

ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೇಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.

ನಿಮ್ಮ ಸಕಾರಾತ್ಮಕ ಚಿಂತನಾ ಶಕ್ತಿಯ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top