fbpx
ಸಮಾಚಾರ

ದೇವರು ನನ್ನ ತಮ್ಮನಿಗೆ ಇನ್ನೊಂದು 10 ನಿಮಿಷ ಟೈಂ ಕೊಡ್ಬೇಕಿತ್ತು: ಶಿವಣ್ಣ ಬೇಸರ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಇಡೀ ಕರ್ನಾಟಕವೇ ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ದೈಹಿಕವಾಗಿ ನಮ್ಮನ್ನು ಆಗಲಿ 6 ದಿನಗಳೇ ಕಳೆದರೂ ಅವರ ಅಗಲಿಕೆಯ ನೋವಿಂದ ಹೊರಬರಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.. ಪಕ್ಕದ ರಾಜ್ಯದ ಸಿನಿಮಾ ಮಂದಿ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಲು ಬರುತ್ತಿದ್ದಾರೆ. ನೆನ್ನೆ ರಾಮಚರಣ್ ಶಿವಣ್ಣನ ಮನೆಗೆ ಬಂದಿದ್ದರು,

ರಾಮ್ ಚರಣ್ ತೇಜಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಶಿವರಾಜ್ ಕುಮಾರ್ ಮಾತಿಗಿಳಿದರು. “ಅಪ್ಪು ಇಲ್ಲ ಅಂತ ಹೇಳೋಕೆ ಮನಸ್ಸಿಗೆ ತುಂಬಾ ಕಷ್ಟ ಆಗುತ್ತದೆ. ಹೇಗೆ ಇದೆಲ್ಲಾ ಆಯ್ತು ಅಂತ ಎಲ್ಲರೂ ಕೇಳುತ್ತಾರೆ. ನಮಗೂ ಅದೇ ಪ್ರಶ್ನೆ ಕಾಡುತ್ತಿದೆ. ಈ ನೋವಿನಿಂದ ನಾವು ಯಾವಾಗ ಸುಧಾರಿಸಿಕೊಳ್ಳುತ್ತೇವೆ ಅನ್ನೋದು ನಮಗೇ ಗೊತ್ತಿಲ್ಲ. ” ಎಂದು ಶಿವಣ್ಣ ಮಾಧ್ಯಮಗಳ ಮುಂದೆ ಹೇಳಿದರು.

ವಿಕ್ರಂ ಆಸ್ಪತ್ರೆಗಿಂತ ಹತ್ತಿರದ ಆಸ್ಪತ್ರೆಗೆ ಹೋಗಬಹುದಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಶಿವಣ್ಣ ‘’ಆ ಸಮಯದಲ್ಲಿ… ಈ ಬಗ್ಗೆ ಏನೂ ಹೇಳೋಕೆ ಆಗಲ್ಲ. ವಿಧಿ ಅಪ್ಪುಗೆ ಒಂದು 10 ನಿಮಿಷ ಟೈಮ್ ಕೊಡಬಹುದಿತ್ತು. ಎಲ್ಲರಿಗೂ ಟೈಮ್ ಕೊಡ್ತಾನೆ, ನಮ್ಮ ಅಪ್ಪುಗೆ ಯಾಕೆ ಕೊಡಲಿಲ್ಲ. ಅಂತಹ ಒಳ್ಳೆಯ ವ್ಯಕ್ತಿಗೆ ಯಾಕೆ ವಿಧಿ ಹೀಗೆ ಮಾಡ್ತು ಅನ್ನೋದು ನಮಗೆಲ್ಲಾ ಕಾಡುತ್ತಲೇ ಇರುತ್ತದೆ’’ ಎಂದರು ಶಿವರಾಜ್ ಕುಮಾರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top